'ದುನಿಯಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ವಿಜಯ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದೇ ತಮ್ಮ 'ಸಲಗ' ಚಿತ್ರದ ಅಪ್ ಡೇಟ್ ಮಾಹಿತಿವೊಂದನ್ನು ಬಹಿರಂಗ ಪಡಿಸಿದ್ದಾರೆ.
ಹೌದು, ಈ ಹಿಂದೆ ಸಲಗ ಸಿನಿಮಾ ಟೈಟಲ್ ಹಾಡನ್ನ ವಿಜಯ್ ಹುಟ್ಟು ಹಬ್ಬದಂದು ಅಂದ್ರೆ (ಜ.20) ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಈ ಹಾಡಿನ ಕೆಲಸಗಳು ಇನ್ನೂ 3 -4 ದಿನ ಬಾಕಿ ಇದ್ದು, ಇದೇ ಜನವರಿ 25ರ ಬೆಳಗ್ಗೆ 10 ಗಂಟೆಗೆ ರಿಲೀಸ್ ಮಾಡುವುದಾಗಿ ದುನಿಯಾ ವಿಜಯ್ ತಿಳಿಸಿದ್ದಾರೆ.
ಈ ಟೈಟಲ್ ಹಾಡಿಗಾಗಿ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ನಿರ್ದೇಶಕ, ನಟ ವಿಜಯ್ ಸಾಕಷ್ಟು ಕಷ್ಟ ಪಟ್ಟಿದ್ದಾರೆ ಅಂತ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ ಇಂದು ಸಲಗ ಟೈಟಲ್ ಟ್ರ್ಯಾಕ್ ರಿಲೀಸ್ ಆಗುತ್ತೆ ಅಂತ ಕಾದು ಕುಳಿತಿದ್ದ 'ಸಲಗ' ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.