ETV Bharat / sitara

ಓದಿನಲ್ಲೂ ಬಲು ಜಾಣೆ ರಿಂಕು...'ಪಿಯುಸಿ'ಯಲ್ಲಿ ಸೈರಾಟ್​ ಸುಂದರಿ ಪಡೆದ ಅಂಕ ಎಷ್ಟು ಗೊತ್ತಾ ?

ಮಹಾರಾಷ್ಟ್ರದ ಹೆಚ್​​ಎಸ್​​ಸಿ ( puc) ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಮರಾಠಿಯ ಸೈರಾಟ್​, ಕನ್ನಡದ ಮನಸ್ಸು ಮಲ್ಲಿಗೆ ಚಿತ್ರದಲ್ಲಿ ನಟಿಸಿದ್ದ ನಟಿ ರಿಂಕು ರಾಜ್​ಗುರು ಮೇಲುಗೈ ಸಾಧಿಸಿದ್ದಾರೆ.

ಚಿತ್ರಕೃಪೆ : ಫೇಸ್​ಬುಕ್​
author img

By

Published : May 28, 2019, 7:17 PM IST

ಮುಂಬೈ : ಸೈರಾಟ್​ ಸುಂದರಿ ರಿಂಕು ರಾಜ್​​ಗುರು HSC (ದ್ವಿತೀಯ ಪಿಯುಸಿ) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರತಿಶತ 82 ಅಂಕ ಬಾಚಿಕೊಂಡು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಮರಾಠಿಯ ಬ್ಲಾಕ್​ ಬಸ್ಟರ್​ 'ಸೈರಾಟ್'​ ಸಿನಿಮಾ ಮೂಲಕ ನ್ಯಾಷನಲ್​ ಸ್ಟಾರ್ ಆಗಿರುವ ರಿಂಕು, ಓದಿನಲ್ಲಿ ಹಿಂದೆ ಬಿದ್ದಿಲ್ಲ. ಅಭಿನಯದ ಜತೆಗೆ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತ ಬಂದಿದ್ದಾರೆ. ಜೈ ತುಳಜಾ ಭವಾನಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಾಹ್ಯ​ ವಿದ್ಯಾರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದ ರಿಂಕು, ಭೌಗೋಳ ಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದಾರೆ. ಇನ್ನುಳಿದಂತೆ ಇಂಗ್ಲಿಷ್​- 54, ಮರಾಠಿ - 83, ರಾಜ್ಯಶಾಸ್ತ್ರ-77, ಅರ್ಥಶಾಸ್ತ್ರ-77 ಹಾಗೂ ಪರಿಸರ ಅಧ್ಯಯನದಲ್ಲಿ 49 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Rinku Rajguru
ಚಿತ್ರಕೃಪೆ : ಫೇಸ್​ಬುಕ್​

ಎಸ್​ಎಸ್​ಸಿ ಓದುತ್ತಿರುವಾಗಲೇ ಸೈರಾಟ್ ಚಿತ್ರದಿಂದ ಅವಕಾಶ ಈಕೆಯನ್ನು ಹುಡುಕಿಕೊಂಡು ಬಂದಿತ್ತು. ಚೊಚ್ಚಲ ಚಿತ್ರದಲ್ಲಿಯೇ ಅದ್ಭುತವಾಗಿ ನಟಿಸಿ, ಚಿತ್ರದ ಗೆಲುವಿಗೆ ಕಾರಣವಾಗಿದ್ದರು. ಅಭಿನಯ ಹಾಗೂ ತರಗತಿಗಳನ್ನು ಸರಿದೂಗಿಸಿಕೊಂಡು ಹೋಗಿದ್ದ ಅರ್ಚಿ, 2017 ರಲ್ಲಿ ಪ್ರಕಟಗೊಂಡಿದ್ದ ಎಸ್​​ಎಸ್​​ಸಿ ಪರೀಕ್ಷೆಯಲ್ಲಿ 66.40 ರಷ್ಟು ಸಾಧನೆ ಮಾಡಿದ್ದರು. ಇದೀಗ ಮತ್ತೊಮ್ಮೆ ನಾನು ಬುದ್ಧಿವಂತೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಇನ್ನು ಸೈರಾಟ್ ಚಿತ್ರದ ಕನ್ನಡ ರಿಮೇಕ್​ ಮನಸ್ಸು ಮಲ್ಲಿಗೆಯಲ್ಲೂ ರಿಂಕು ರಾಜ್​​ಗುರು ನಟಿಸಿ, ಕನ್ನಡಿಗರು ಮೆಚ್ಚುಗೆ ಪಡೆದಿದ್ದಾರೆ. ಕನ್ನಡ ಸಿನಿರಸಿಕರಿಗೂ ಈಕೆಯ ಮುಖ ಪರಿಚಿತ. ಇವರು ನಟಿಸಿದ್ದ ಮರಾಠಿಯ ಕಾಗರ್ ಚಿತ್ರ ಕಳೆದ ತಿಂಗಳವಷ್ಟೆ ತೆರೆ ಕಂಡು ಅದ್ಭುತ ಪ್ರದರ್ಶನ ಕಾಣುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.