ಬೆಂಗಳೂರು: ನಿರ್ದೇಶಕ ರವಿ ತೇಜ ಆ್ಯಕ್ಷನ್ ಕಟ್ ಹೇಳಿರುವ ತಾಯಿ ಮಗನ ಸೆಂಟಿಮೆಂಟ್ ಕಥಾ ಹಂದರ ಹೊಂದಿರುವ ಚಿತ್ರ "ಸಾಗುತ ದೂರ ದೂರ" ಹಲವಾರು ಅಡೆತಡೆಗಳನ್ನು ಮೆಟ್ಟಿನಿಂತು ಕೊನೆಗೂ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಫೆಬ್ರವರಿ 14 ಪ್ರೇಮಿಗಳ ದಿನದಂದು ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಚಿತ್ರ ಸಿದ್ದವಾಗಿದೆ. "ಜಾತ್ರೆ" ಚಿತ್ರದ ನಂತರ ನಿರ್ದೇಶದಲ್ಲಿ ಭರವಸೆ ಮೂಡಿಸಿದ್ದ ನಿರ್ದೇಶಕ ರವಿ ತೇಜ ಈಗ ಸಾಗುತ ದೂರ ದೂರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ತಾಯಿ ಮಗನ ಸೆಂಟಿಮೆಂಟ್ ಕಥೆಯ ಜೊತೆಗೆ ಮರ್ಡರ್ ಮಿಸ್ಟರಿಯನ್ನು ಹೇಳಲು ಹೊರಟಿದ್ದಾರೆ.
ಚಿತ್ರದಲ್ಲಿ,ಮಹೇಶ್,ನವೀನ್ ಕುಮಾರ್, ಆಶಿಕ್ ಆರ್ಯ ಅಭಿನಯಿಸಿದ್ರೆ. ಫೀ ಮೇಲ್ ಲೀಡ್ ರೋಲ್ನಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ನಟಿಸಿದ್ದಾರೆ. ಅಲ್ಲದೆ ತಾಯಿ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದು, ಮೋಹನ್ ಜುನೇಜ ಹಾಸ್ಯ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈಗಾಗಲೇ ಸೆನ್ಸಾರ್ ಬೋರ್ಡ್ ಎಕ್ಸಾಂ ಪಾಸ್ ಮಾಡಿರುವ ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿರೋದು ಚಿತ್ರ ತಂಡಕ್ಕೆ ಚಿತ್ರದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿಸಿದೆ.
ಸಾಗುತ ದೂರ ದೂರ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ರಾಕಿಂಗ್ ಸ್ಟಾರ್ ಯಶ್, ಚಿತ್ರದ ಟ್ರೈಲರ್ ಲಾಂಚ್ ಮಾಡಿ ಶುಭ ಹಾರೈಸಿದ್ದು, ಚಿತ್ರ ತಂಡಕ್ಕೆ ಆನೆಬಲ ಸಿಕ್ಕಂತಾಗದ್ದು, ಕಂಟೆಟ್ ಸ್ಟ್ರಾಂಗ್ ಇದ್ರೆ ಕನ್ನಡಿಗರು ಖಂಡಿತಾ ಕೈಬಿಡುವುದಿಲ್ಲ ಎಂಬ ನಂಬಿಕೆಯೊಂದಿಗೆ ಚಿತ್ರ ತಂಡ ಇದೇ ಫೆಬ್ರವರಿ14 ಪ್ರೇಮಿಗಳ ದಿನದಂದು ಪ್ರೇಕ್ಷಕ ಪ್ರಭುಗಳ ಮುಂದೆ ಬರ್ತಿದ್ದು ,ಸಿನಿ ರಸಿಕರು ಚಿತ್ರವನ್ನು ಎಷ್ಟು ದೂರ ಕರ್ಕೊಂಡು ಹೋಗ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.