ತಾಯಿಯ ಎದೆ ಹಾಲು ಮಕ್ಕಳಿಗೆ ಸಂಜೀವಿನಿ. ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ದಿಗೆ ಎದೆ ಹಾಲು ಬಹಳ ಮುಖ್ಯ. ಹೀಗೆ ಸಹಾಯಕಾರಿಯಾಗುವ ಎದೆ ಹಾಲನ್ನು ಬಾಲಿವುಡ್ನ ನಿರ್ಮಾಪಕಿಯೊಬ್ಬರು ದಾನ ಮಾಡಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಬರೋಬ್ಬರಿ 42 ಲೀಟರ್ ಎದೆ ಹಾಲನ್ನು ದಾನ ಮಾಡಿ ಮಾದರಿಯಾಗಿದ್ದಾರೆ.
ಬಾಲಿವುಡ್ನ ನಿರ್ಮಾಪಕಿ ನಿಧಿ ಪಾರ್ಮಾರ್ ಈ ಮಹತ್ಕಾರ್ಯವನ್ನು ಮಾಡಿದ್ದಾರೆ. ಇತ್ತೀಚೆಗೆ ನಡೆದ ಖಾಸಗಿ ಮಾಧ್ಯಮದ ಸಂದರ್ಶನ ಒಂದರಲ್ಲಿ ನಿಧಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದೇ ವರ್ಷದ ಫೆಬ್ರವರಿಯಲ್ಲಿ ನಿಧಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ ಮಗುವಿಗೆ ಹಾಲುಣಿಸಿದ ಬಳಿಕ ಹೆಚ್ಚಾದ ಎದೆ ಹಾಲನ್ನು ಫ್ರಿಜ್ನಲ್ಲಿ ಸಂಗ್ರಹಿಸಿಡುತ್ತಿದ್ದರಂತೆ. ನಂತ್ರ ಮುಂಬೈನ ಸೂರ್ಯ ಆಸ್ಪತ್ರೆಗೆ ದಾನ ಮಾಡುವುದಾಗಿ ನಿಧಿ ತಿಳಿಸಿದ್ದಾರೆ.
ಬಾಂದ್ರಾ ಮಹಿಳಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿದ ಬಳಿಗೆ ಹಾಲನ್ನು ದಾನ ಮಾಡಲು ಅವರು ತಿಳಿಸಿದ್ದಾರೆ. ಇದಾದ ನಂತ್ರ ಹಾಲು ದಾನ ಮಾಡಲು ನಿರ್ಮಾಪಕಿ ಮುಂದಾಗಿದ್ದಾರೆ.
ಕೆಲವರು ತಮ್ಮ ಎದೆ ಹಾಲನ್ನು ಮಕ್ಕಳಿಗೆ ಸ್ನಾನ ಮಾಡಿಸಲು ಮತ್ತು ಕಾಲುಗಳನ್ನು ಸ್ಕ್ರಬ್ ಮಾಡಲು ಬಳಸುತ್ತಾರೆ. ಇನ್ನು ಕೆಲವರು ಫೆಸ್ ಪ್ಯಾಕ್ ಮಾಡಲು ಸಲೂನ್ಗಳಿಗೆ ಕೊಡುತ್ತಾರೆ. ಆದ್ರೆ ನನಗೆ ಈ ರೀತಿ ವ್ಯರ್ಥ ಮಾಡಲು ಇಷ್ಟವಿರಲಿಲ್ಲ. ಆದ್ರಿಂದ ಆಸ್ಪತ್ರೆಗೆ ದಾನ ಮಾಡಿದೆ ಎಂದು ತಿಳಿಸಿದ್ದಾರೆ.