ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಾಹೋ ಸಿನಿಮಾ ನಿನ್ನೆ ವಿಶ್ವಾದ್ಯಂತ 10 ಸಾವಿರ ಪರದೆಗಳ ಮೇಲೆ ತೆರೆ ಕಂಡಿದೆ.
ಸತತ ಎರಡು ವರ್ಷಗಳ ಕಾಲ ₹350 ಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಸಾಹೋ ಮೊದಲ ದಿನದ ಗಳಿಕೆ ಎಷ್ಟು ಎಂಬುದು ರಿವೀಲ್ ಆಗಿದೆ. ಸದ್ಯದ ಮಾಹಿತಿ ಪ್ರಕಾರ ಬರೋಬ್ಬರಿ ₹24 ಕೋಟಿ ಬಾಚಿಕೊಂಡಿದೆಯಂತೆ.
ಪ್ರಭಾಸ್ ಹಾಗೂ ಬಾಲಿವುಡ್ ನಟಿ ಶ್ರದ್ದಾ ಕಪೂರ್ ನಟಿಸಿರುವ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ, ಬಿಡುಗಡೆ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫಸ್ಟ್ ಡೇ, ಫಸ್ಟ್ ಶೋ ನೋಡಿದವರು ತಮ್ಮದೇ ರೀತಿಯಲ್ಲಿ ಸಾಹೋ ವ್ಯಾಖ್ಯಾನಿಸುತ್ತಿದ್ದಾರೆ.
ಬಾಹುಬಲಿಯಂತಹ ಬಿಗ್ ಸಿನಿಮಾ ಬಳಿಕ ಸಾಹೋದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದು, ಈ ಚಿತ್ರ ಕೂಡ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲಿದೆ ಎನ್ನಲಾಗಿತ್ತು. ಆದರೆ, ಚಿತ್ರದ ಮೊದಲ ದಿನದ ಗಳಿಕೆ ಮಾತ್ರ ನೀರಸವಾಗಿದೆ ಎನ್ನಲಾಗುತ್ತಿದೆ.