ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ದೇಶಾದ್ಯಂತ ಸ್ವಜನಪಕ್ಷಪಾತದ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸ್ಟಾರ್ ಕಿಡ್ಗಳ ಮೇಲೆ ಸುಶಾಂತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್ ಕಿಡ್ಗಳ ಚಿತ್ರಗಳನ್ನು ಬಹಿಷ್ಕರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.
- " class="align-text-top noRightClick twitterSection" data="
">
ಈ ನಡುವೆ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಚಿತ್ರದಲ್ಲೂ ಆಲಿಯಾ ಭಟ್ ನಟಿಸುತ್ತಿದ್ದು ಚಿತ್ರದಲ್ಲಿ ಆಲಿಯಾ ಬದಲಿಗೆ ಬೇರೆ ನಟಿಯನ್ನು ಕರೆ ತರಲು ಚಿತ್ರತಂಡ ಯೋಚಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಮೂಲವೊಂದರ ಪ್ರಕಾರ ಆಲಿಯಾ ಭಟ್ ಜಾಗಕ್ಕೆ ಪ್ರಿಯಾಂಕ ಛೋಪ್ರಾ ಅವರನ್ನು ಕರೆತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ.
ಮಹೇಶ್ ಭಟ್ ನಿರ್ದೇಶನದಲ್ಲಿ ಆಲಿಯಾ ಭಟ್ ನಟಿಸುತ್ತಿರುವ 'ಸಡಕ್-2' ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಆದರೆ ಟ್ರೇಲರ್ಗೆ ನಿರೀಕ್ಷಿಸಿದಷ್ಟು ವೀಕ್ಷಣೆ ದೊರೆತಿಲ್ಲ. ಇನ್ನು ಆಲಿಯಾ ಭಟ್ ಚಿತ್ರವನ್ನು ಬಹಿಷ್ಕರಿಸಲು ಸುಶಾಂತ್ ಅಭಿಮಾನಿಗಳು ನಿರ್ಧರಿಸಿರುವುದರಿಂದ ಈ ಪರಿಣಾಮ 'ಆರ್ಆರ್ಆರ್' ಚಿತ್ರದ ಮೇಲೂ ಬೀಳುವ ಭಯ ಕಾಡತೊಡಗಿದೆ. ಆದ್ದರಿಂದ ಚಿತ್ರತಂಡ ಆಲಿಯಾ ಭಟ್ ಅವರನ್ನು ಚಿತ್ರದಿಂದ ಕೈ ಬಿಡಲು ನಿರ್ಧರಿಸಿದೆ.
ಆಲಿಯಾ ಕೆಲವೊಂದು ಕಾರಣಗಳಿಂದ ಚಿತ್ರದಿಂದ ಹೊರ ಹೋಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಆದರೆ ಮೇ ತಿಂಗಳಲ್ಲಿ 'ಆರ್ಆರ್ಆರ್' ಚಿತ್ರತಂಡ ಈ ಬಗ್ಗೆ ಪ್ರತಿಕ್ರಿಯಿಸಿ ಈ ಚಿತ್ರದ ಸೀತಾ ಪಾತ್ರಕ್ಕೆ ಆಲಿಯಾ ಭಟ್ ಸೂಕ್ತ ನಟಿ, ಆಕೆ ಚಿತ್ರದಿಂದ ಹೊರ ಹೋಗುತ್ತಿರುವುದು ಸುಳ್ಳುಸುದ್ದಿ ಎಂದು ಸ್ಪಷ್ಟನೆ ನೀಡಿತ್ತು. ಆದರೆ ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಪರಿಸ್ಥಿತಿ ಬದಲಾಗಿದೆ.
'ಆರ್ಆರ್ಆರ್' ದೊಡ್ಡ ತಾರಾಗಣದ ಚಿತ್ರವಾಗಿದ್ದು ರಾಮ್ಚರಣ್ ತೇಜ, ಜ್ಯೂನಿಯರ್ ಎನ್ಟಿಆರ್, ಬಾಲಿವುಡ್ ನಟ ಅಜಯ್ ದೇವ್ಗನ್, ಹಾಲಿವುಡ್ ನಟರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಹಾಗೂ ಇನ್ನಿತರರು ನಟಿಸಿದ್ದಾರೆ. ತೆಲುಗು ಸ್ವಾತಂತ್ರ್ಯ ಹೋರಾಟಗಾರ ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಮ್ ಭೀಮ್ ಜೀವನ ಆಧಾರಿತ ಚಿತ್ರ ಇದಾಗಿದೆ. ಚಿತ್ರವನ್ನು 450 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗುತ್ತಿದೆ.
2021 ಜನವರಿ 8 ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಕೋವಿಡ್-19 ಲಾಕ್ ಡೌನ್ನಿಂದ ಚಿತ್ರೀಕರಣ ಚಟುವಟಿಕೆಗಳು ಸ್ಥಗಿತಗೊಂಡ ಕಾರಣ ಚಿತ್ರ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ.