ರಾಮ್ಚರಣ್ ಮತ್ತು ಜೂ.ಎನ್ಟಿಆರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಆರ್ಆರ್ಆರ್ ದಿನದಿಂದ ದಿನಕ್ಕೆ ಕುತೂಹಲಗಳನ್ನು ಹೆಚ್ಚಿಸುತ್ತಿದೆ. ಆರ್ಆರ್ಆರ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಇಂದಿನಿಂದ ಶುರುವಾಗಿದ್ದು, ಈ ಮಾಹಿತಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಚಿತ್ರತಂಡ, ಚಿತ್ರದ ಪ್ರಮುಖ ಹಂತದ ಕ್ಲೈಮ್ಯಾಕ್ಸ್ಶೂಟಿಂಗ್ ಶುರುವಾಗಿದೆ. ಕೋಮುರಾಮ್ ಭೀಮ್ ಮತ್ತು ಸೀತಾ ರಾಮರಾಜು ಇಬ್ಬರು ಸೇರಿಕೊಂಡು ಸಾಧನೆ ಮಾಡಲು ಹೊರಟಿದ್ದಾರೆ. ಅತಿ ಶೀಘ್ರದಲ್ಲಿ ದೊಡ್ಡ ಪರದೆ ಮೇಲೆ ಬರುತ್ತೇವೆ ಎಂದು ಬರೆದುಕೊಂಡಿದ್ದಾರೆ.
-
The MASSIVE CLIMAX shoot has begun!
— RRR Movie (@RRRMovie) January 19, 2021 " class="align-text-top noRightClick twitterSection" data="
Mighty Bheem and Fiery Ramaraju are set to accomplish what they desired to achieve, together ✊🏻
A BIG SCREEN ExtRRRavaganza is coming your way🔥🌊 #RRRMovie #RRR pic.twitter.com/4IZ8i89e0g
">The MASSIVE CLIMAX shoot has begun!
— RRR Movie (@RRRMovie) January 19, 2021
Mighty Bheem and Fiery Ramaraju are set to accomplish what they desired to achieve, together ✊🏻
A BIG SCREEN ExtRRRavaganza is coming your way🔥🌊 #RRRMovie #RRR pic.twitter.com/4IZ8i89e0gThe MASSIVE CLIMAX shoot has begun!
— RRR Movie (@RRRMovie) January 19, 2021
Mighty Bheem and Fiery Ramaraju are set to accomplish what they desired to achieve, together ✊🏻
A BIG SCREEN ExtRRRavaganza is coming your way🔥🌊 #RRRMovie #RRR pic.twitter.com/4IZ8i89e0g
ಸದ್ಯ ಚಿತ್ರತಂಡ ರಿಲೀಸ್ ಮಾಡಿರುವ ಫೋಟೋದಲ್ಲಿ ಕೋಮುರಾಮ್ ಭೀಮ್ ಮತ್ತು ರಾಮರಾಜು ಜೊತೆಯಾಗಿ ಫೈಟ್ ಮಾಡುತ್ತಿದ್ದಾರೆ. ಅವರ ಕೈಗಳು ರಕ್ತದಿಂದ ಕೂಡಿದ್ದು, ಈ ಯುದ್ದದ ಸೀನ್ ಸಿನಿಮಾದಲ್ಲಿ ಸಖತ್ ಥ್ರಿಲ್ ನೀಡಬಹುದೆಂದು ಊಹಿಸಬಹುದು.
ಮತ್ತೊಂದು ಮಾಹಿತಿ ಪ್ರಕಾರ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಮುಗಿದ ಮೇಲೆ ರಾಮ್ಚರಣ್ ಮತ್ತು ಆಲಿಯಾ ಭಟ್ ನಡುವಿನ ಹಾಡೊಂದರ ಶೂಟಿಂಗ್ ಫೆಬ್ರವರಿಯಲ್ಲಿ ಮಾಡಲಾಗುವುದು ಎಂದು ಹೇಳಲಾಗಿದೆ.
ಆರ್ಆರ್ಆರ್ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, 350 ಕೋಟಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿದ್ದಾರೆ.