ಬಾಲಿವುಡ್ನ ರಾಜ್ಕುಮಾರ್ ರಾವ್, ವರುಣ್ ಶರ್ಮಾ, ಜಾನ್ಹವಿ ಕಪೂರ್ ನಟನೆಯ ರೂಹಿ ಸಿನಿಮಾದ ಟ್ರೇಲರ್ ರಿಲೀಸ್ ಆದ ಒಂದೇ ದಿನಕ್ಕೆ ಬರೋಬ್ಬರಿ 14 ಮಿಲಿಯನ್ ವಿಕ್ಷಣೆ ಪಡೆದು ದಾಖಲೆ ಬರೆದಿದೆ.
ಹಾರಾರ್ ಕಥಾಹಂದರ ಹೊಂದಿರುವ ಈ ರೂಹಿ ಟ್ರೇಲರ್ ಕಳದೆ ಮಂಗಳವಾರ ತೆರೆ ಕಂಡಿದ್ದು, ಕೇವಲ 24 ಗಂಟೆಗಳಲ್ಲಿ 14,123,568 ವೀಕ್ಷಣೆ ಪಡೆದು ಟ್ರೆಂಡಿಂಗ್ನಲ್ಲಿದೆ. ಇನ್ನು ಈ ಯಶಸ್ಸಿಗೆ ಬಾಲಿವುಡ್ ತಾರೆಯರಾದ ಆಯುಷ್ಮಾನ್ ಖುರಾನ್, ಕೃತಿ ಸನೂನ್, ಕಿಕ್ಕಿ ಕೌಶಲ್, ವರುಣ್ ಧವನ್, ಸೋನಾಕ್ಷಿ ಸಿನ್ಹಾ ಸೇರದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
ರೂಹಿ ಸಿನಿಮಾಕ್ಕೆ ಹಾರ್ದಿಕ್ ಮೆಹ್ತಾ ಆ್ಯಕ್ಷನ್ ಕಟ್ ಹೇಳಿದ್ದು, ಜಿಯೋ ಸ್ಟುಡಿಯೋ ಮತ್ತು ದಿನೇಶ್ ವಿಜನ್ ನಿರ್ಮಾಣ ಮಾಡಿದ್ದಾರೆ.
- " class="align-text-top noRightClick twitterSection" data="">