ಕೆಜಿಎಫ್ ಸಿನಿಮಾ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದ ರಾಕಿಂಗ್ ಸ್ಟಾರ್ ಯಶ್ ಮಂಡ್ಯ ಚುನಾವಣಾ ಪ್ರಚಾರದ ಬಳಿಕ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಇದರ ಜೊತೆಗೆ ರಾಕಿಭಾಯ್ ಕೆಜಿಎಫ್ ಚಾಪ್ಟರ್-2ರ ಭರ್ಜರಿ ತಯಾರಿಯಲ್ಲಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆಗೆ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದಾಗಿನಿಂದ ಯಶ್ ಸುಮಲತಾ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡಿದ್ದರು. ಆ ಸಮಯದಲ್ಲಿ ಸಹಜವಾಗಿ ಯಶ್ ಬಿಸಿಲಿನ ತಾಪಕ್ಕೆ ಸೊರಗಿದ್ದರು. ಇದೀಗ ಮಂಡ್ಯ ಚುನಾವಣೆ ಕೂಡಾ ಮುಗಿದಿದ್ದು, ಯಶ್ ಕೆಜಿಎಫ್-2 ತಮ್ಮ ಭಾಗದ ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ.
ಸದ್ಯಕ್ಕೆ ರಾಕಿಭಾಯ್ ದಿನಕ್ಕೆ ಬೆಳಗ್ಗೆ ಎರಡು ಗಂಟೆ, ಸಂಜೆ ಎರಡು ಗಂಟೆಯಂತೆ ಜಿಮ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಹಾಗೇ ತಲೆಗೂದಲಿಗೆ ಹೊಸ ರೂಪ ಕೊಟ್ಟಿದ್ದಾರೆ. ಚುನಾವಣೆ ಪ್ರಚಾರದ ಬಳಿಕ ಯಶ್ ಹ್ಯಾಂಡಸಮ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.