ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಕಳೆದ ಕೆಲ ದಿನಗಳಿಂದ ಒಂದಲ್ಲೊಂದು ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಾರೆ.
ತನ್ನ ಮುದ್ದು ಮುಖದ ಮೂಲಕ ಕ್ಯೂಟ್ ಪುಟಾಣಿ ಐರಾ ಅಪ್ಪ ಅಮ್ಮನಂತೆ ಫೇಮಸ್ ಆಗುತ್ತಿದ್ದಾಳೆ. ಯಶ್ ಸಿನಿಮಾ ಶೂಟಿಂಗ್ ಇಲ್ಲದೆ ಟೈಮ್ನಲ್ಲಿ ಮಗಳ ಜೊತೆ ಕಾಲ ಕಳೆಯೋದಿಕ್ಕೆ ಇಷ್ಟ ಪಡ್ತಾರೆ.
ಈಗ ಯಶ್ ಕೇಳುವ ಮಾತಿಗೆ ಐರಾ ತೊದಲ ಮಾತಿನಿಂದ ಉತ್ತರಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾಳೆ.
ಐರಾ ಫೋಟೋ ಶೂಟ್ನಲ್ಲಿ ಅಪ್ಪ ಅಮ್ಮನಂತೆ ಸಖತ್ ಅಟ್ರಾಕ್ಟ್ ಮಾಡುತ್ತಿದ್ದಾಳೆ.ಸದ್ಯ ಐದು ಸೆಕೆಂಡ್ ಇರುವ ಬ್ಯೂಟಿಫುಲ್ ವಿಡಿಯೋವನ್ನ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.