ಕೆಲ ದಿನಗಳ ಹಿಂದೆ ನಟ ದರ್ಶನ್ ಹೆಸರಲ್ಲಿ ₹25 ಕೋಟಿ ನಕಲಿ ಬ್ಯಾಂಕ್ ಲೋನ್ ವಿಚಾರವಾಗಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸುದ್ದಿಯಲ್ಲಿದ್ದರು. ಘಟನೆ ತಣ್ಣಗಾಗಿರೋ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ.
ರಾಮೋಜಿ ರಾವ್ ಫಿಲ್ಮ್ ಸಿಟಿ ತರ ಬೆಂಗಳೂರಿನಲ್ಲಿ ದೊಡ್ಡ ಫಿಲ್ಮ್ ಸಿಟಿ ಕಟ್ಟಬೇಕು ಎಂಬುದು ನಿರ್ಮಾಪಕ ಉಮಾಪತಿ ಅವರ ಕನಸು. ಮತ್ತೊಂದು ಕಡೆ ಕಾಂಟ್ರವರ್ಸಿ ಬಳಿಕ ಉಮಾಪತಿ ಮತ್ತೆ ಫಿಲ್ಮ್ ಸಿಟಿ ಕಟ್ಟೋದಿಲ್ಲ ಅಂತೆಲ್ಲ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬಂದಿದ್ದವು. ಆದರೆ, ಅದಕೆಲ್ಲ ತಲೆಕೆಡಿಸಿಕೊಳ್ಳದ ಉಮಾಪತಿ, ಕೊನೆಗೂ ತಾನು ಅಂದುಕೊಂಡಂತೆ ತನ್ನ ಡ್ರಿಮ್ ಪ್ರಾಜೆಕ್ಟ್ ಕಟ್ಟುವ ಕೆಲಸ ಶುರು ಮಾಡಿದ್ದಾರೆ.
ಬೆಂಗಳೂರಿನ ಕನಕಪುರ ರೋಡ್ ಬಳಿ ಇರುವ ಉತ್ರಿಯಲ್ಲಿ ಇಂದು ಉಮಾಪತಿ ಫ್ಯಾಮಿಲಿ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಭೂಮಿ ಪೂಜೆ ಮಾಡಿದ್ದಾರೆ. ಅಂದಾಜು 25 ಎಕರೆ ಜಾಗದಲ್ಲಿ ಸುಮಾರು ₹175 ಕೋಟಿ ವೆಚ್ಚದಲ್ಲಿ ಉಮಾಪತಿಯವರು ಫಿಲ್ಮ್ ಸಿಟಿ ನಿರ್ಮಾಣ ಮಾಡೋದಕ್ಕೆ ಮುಂದಾಗಿದ್ದಾರೆ.
ಓದಿ: ಕನ್ನಡ & ತೆಲುಗು ಸಾಂಗ್ ರೆಕಾರ್ಡಿಂಗ್ ಮುಗಿಸಿದ 'ಶೋಕಿವಾಲ'
ಇನ್ನು, ಹೆಬ್ಬುಲಿ, ಒಂದಲ್ಲಾ ಎರಡಲ್ಲಾ, ರಾಬರ್ಟ್ ಸಿನಿಮಾವನ್ನು ಉಮಾಪತಿ ನಿರ್ಮಾಣ ಮಾಡಿದ್ದಾರೆ. ಅಂದುಕೊಂಡಂತೆ ಫಿಲ್ಮ್ ಸಿಟಿ ಕಟ್ಟುವ ಕೆಲಸ ಶುರುವಾಗಿದ್ದು, ಈ ಫಿಲ್ಮ್ ಸಿಟಿಯಲ್ಲಿ ಏನೆಲ್ಲ ಇರುತ್ತೆ ಅನ್ನೋದು ಗೊತ್ತಾಗಬೇಕಾದರೆ ಸ್ವಲ್ಪ ದಿನಗಳವರೆಗೂ ಕಾಯಬೇಕು.