ETV Bharat / sitara

'ರಾಬರ್ಟ್' ವಿಜಯ ಯಾತ್ರೆ ರದ್ದು.. ಡಿ ಬಾಸ್​ ಕೊಟ್ಟ ಕಾರಣವೇನು ಗೊತ್ತಾ.? - Sandalwood latest news

ರಾಬರ್ಟ್​ ವಿಜಯ ಯಾತ್ರೆ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಇದಕ್ಕೆ ಕಾರಣ ಚಿತ್ರತಂಡ ವಿಜಯ ಯಾತ್ರೆಯನ್ನು ರದ್ದುಗೊಳಿಸಿದೆ. ಕೋವಿಡ್​ ಭೀತಿ ಹಿನ್ನೆಲೆ ವಿಜಯ ಯಾತ್ರೆ ರದ್ದಾಗಿರುವ ಬಗ್ಗೆ ದರ್ಶನ್​ ಟ್ವೀಟ್​ ಮಾಡಿದ್ದಾರೆ.

ರಾಬರ್ಟ್​ ವಿಜಯ ಯಾತ್ರೆ ರದ್ದು,  ರಾಬರ್ಟ್​ ವಿಜಯ ಯಾತ್ರೆ ರದ್ದು ಸುದ್ದಿ, ರಾಬರ್ಟ್​ ವಿಜಯ ಯಾತ್ರೆ ಸುದ್ದಿ, Robert film Vijaya Yatre Cancel,  Robert film Vijaya Yatre Cancel news,  Robert film Vijaya Yatre,  Robert film Vijaya Yatre news,  Robert film,  Darshan new film Robert,  Darshan new film,
ರಾಬರ್ಟ್​ ವಿಜಯ ಯಾತ್ರೆ ರದ್ದು
author img

By

Published : Mar 28, 2021, 9:45 AM IST

'ಚಾಲೆಂಜಿಂಗ್ ಸ್ಟಾರ್‌' ದರ್ಶನ್‌ ಅಭಿನಯದ 'ರಾಬರ್ಟ್' ಸಿನಿಮಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು. ಈ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಆಚರಿಸುವುದಕ್ಕೆ ದಚ್ಚು ಮತ್ತು ರಾಬರ್ಟ್​ ಚಿತ್ರತಂಡ ರಾಜ್ಯಾದ್ಯಂತ 'ವಿಜಯ ಯಾತ್ರೆ' ಮಾಡುವುದಕ್ಕೆ ಪ್ಲ್ಯಾನ್ ಹಾಕಿಕೊಂಡಿತ್ತು. ಆದರೆ, ಈಗ ಕೊರೊನಾ ವೈರಸ್​ ಹೆಚ್ಚುತ್ತಿರುವುದರಿಂದ ಚಿತ್ರತಂಡ ವಿಜಯ ಯಾತ್ರೆಯನ್ನು ರದ್ದುಗೊಳಿಸಿದೆ.

ಇದೇ ಮಾರ್ಚ್ 29ರ ಸೋಮವಾರದಿಂದ 'ರಾಬರ್ಟ್' ವಿಜಯ ಯಾತ್ರೆ ಆರಂಭಗೊಳ್ಳಬೇಕಿತ್ತು. ಮೊದಲು ಚಿತ್ರತಂಡ ತುಮಕೂರಿಗೆ ಭೇಟಿ ನೀಡುವ ಮೂಲಕ ವಿಜಯ ಯಾತ್ರೆಗೆ ಚಾಲನೆ ನೀಡುವ ಆಲೋಚನೆಯಲ್ಲಿತ್ತು. ಮಾ.29 ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಗೆ, ಮಾ.30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಗೆ ಮಾ.31ರಂದು ತಿಪಟೂರು, ಹಾಸನ ಹಾಗೂ ಶಿವಮೊಗ್ಗ, ಏ.1ರಂದು ಗಂಡ್ಲುಪೇಟೆ, ಮಂಡ್ಯ, ಮೈಸೂರು ಹಾಗೂ ಮದ್ದೂರಿಗೆ ಭೇಟಿ ನೀಡಬೇಕಿತ್ತು. ತಮ್ಮ ಸಿನಿಮಾಕ್ಕೆ ದೊಡ್ಡ ಯಶಸ್ಸು ನೀಡಿರುವುದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ಹೇಳಲಿದ್ದರು.

ಆದರೆ, ಇದೀಗ ಕೋವಿಡ್​ ಭೀತಿ ಹಿನ್ನೆಲೆ ವಿಜಯ ಯಾತ್ರೆ ರದ್ದಾಗಿರುವ ಬಗ್ಗೆ ದರ್ಶನ್​ ಟ್ವೀಟ್​ ಮಾಡಿದ್ದು, "ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ" ಎಂದು ತಿಳಿಸಿದ್ದಾರೆ.

  • ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ pic.twitter.com/u44VL8eXAk

    — Darshan Thoogudeepa (@dasadarshan) March 27, 2021 " class="align-text-top noRightClick twitterSection" data=" ">

"ನಿಮ್ಮ ಆರೋಗ್ಯವೇ ನಮ್ಮ ಹಾಗೂ ಸರ್ಕಾರದ ಮೊದಲ ಆದ್ಯತೆ. ದಯಮಾಡಿ ಮಾಸ್ಕ್ ಧರಿಸಿ ನಿಮ್ಮ ಜಾಗ್ರತೆಯಲ್ಲಿರಿ. ಈಗಿನ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಾವು ಖಂಡಿತ ನಿಮ್ಮ ಊರಿಗೆ ಆಗಮಿಸುತ್ತೇವೆ. ನಿಮ್ಮ ಪ್ರೀತಿ-ವಿಶ್ವಾಸ ಸದಾ ಹೀಗೆ ಇರಲಿ. ಇಂತಿ ನಿಮ್ಮ ಪ್ರೀತಿಯ ದಾಸ" ಎಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಟ್ವೀಟ್​ ಮಾಡಿದ್ದಾರೆ.

  • ನಿಮ್ಮ ಆರೋಗ್ಯವೇ ನಮ್ಮ ಹಾಗೂ ಸರ್ಕಾರದ ಮೊದಲ ಆಧ್ಯತೆ. ದಯಮಾಡಿ ಮಾಸ್ಕ್ ಧರಿಸಿ ನಿಮ್ಮ ಜಾಗೃಕತೆಯಲ್ಲಿರಿ. ಈಗಿನ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಾವು ಖಂಡಿತ ನಿಮ್ಮ ಊರಿಗೆ ಆಗಮಿಸುತ್ತೇವೆ. ನಿಮ್ಮ ಪ್ರೀತಿ-ವಿಶ್ವಾಸ ಸದಾ ಹೀಗೆ ಇರಲಿ 🙏

    ಇಂತಿ ನಿಮ್ಮ ಪ್ರೀತಿಯ ದಾಸ@umap30071 @TharunSudhir @UmapathyFilms @StarAshaBhat

ರಾಬರ್ಟ್​ ಚಿತ್ರದಲ್ಲಿ ನಾಯಕಿಯಾಗಿ ಆಶಾ ಭಟ್ ನಟಿಸಿದ್ದಾರೆ. ಖಳರಾಗಿ ರವಿಶಂಕರ್ ಮತ್ತು ಜಗಪತಿ ಬಾಬು ಹಾಗೂ ವಿನೋದ್ ಪ್ರಭಾಕರ್ ಬಹುಮುಖ್ಯ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.