ETV Bharat / sitara

ಬಿಡುಗಡೆಗೂ ಮುನ್ನವೇ ಶುರುವಾಯ್ತು ಕ್ರೇಜ್....ಕಾರಿನ ಬಾನೆಟ್ ಮೇಲೂ 'ರಾಬರ್ಟ್' ದರ್ಬಾರ್​​..! - Roberrt poster on car bonnet

'ರಾಬರ್ಟ್' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾದಾಗಿನಿಂದ ದರ್ಶನ್ ಅಭಿಮಾನಿಗಳು ಸಿನಿಮಾ ನೋಡಲು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗಲೇ ಸಿನಿಮಾ ಕ್ರೇಜ್ ಆರಂಭವಾಗಿದೆ. ಅಭಿಮಾನಿಗಳು ತಮ್ಮ ಕಾರುಗಳ ಬ್ಯಾನೆಟ್ ಮೇಲೆ ಸಿನಿಮಾ ಪೋಸ್ಟರ್​​​​​​​​​​​​​​​​​ ಹಾಕಿಸಿಕೊಳ್ಳುತ್ತಿದ್ದಾರೆ.

Roberrt
ರಾಬರ್ಟ್
author img

By

Published : Feb 18, 2021, 12:54 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮಾರ್ಚ್ 11 ಶಿವರಾತ್ರಿಯಂದು ತೆರೆ ಕಾಣುತ್ತಿದೆ. ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಿರುವ ಟ್ರೇಲರ್ ಈಗಾಗಲೇ 6 ಮಿಲಿಯನ್​​​ಗೂ ಹೆಚ್ಚು ವೀಕ್ಷಣೆಯಾಗಿದೆ.

Roberrt movie craze
ಮಲ್ಟಿಪ್ಲೆಕ್ಸ್​​​ನಲ್ಲಿ 'ರಾಬರ್ಟ್' ಕಟೌಟ್
Roberrt movie craze
ಕಾರಿನ ಬಾನೆಟ್ ಮೇಲೆ 'ರಾಬರ್ಟ್' ಪೋಸ್ಟರ್​

ಇದನ್ನೂ ಓದಿ: ಕೊನೆಗೂ ನನಸಾದ ಕನಸು...ಕುರಿ ಪ್ರತಾಪ್ ಈಗ ಹೀರೋ

ಸಿನಿಮಾ ಬಿಡುಗಡೆಯಾಗಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಆದರೆ ಈಗಾಗಲೇ ಎಲ್ಲೆಡೆ 'ರಾಬರ್ಟ್' ಕ್ರೇಜ್ ಶುರುವಾಗಿದೆ. ಒಂದು ತಿಂಗಳು ಮುಂಚಿತವಾಗಿ ಮಲ್ಟಿಪ್ಲೆಕ್ಸ್​​​​​​​​​​​​​ನಲ್ಲಿ 'ರಾಬರ್ಟ್' ಸಿನಿಮಾದ ಪೋಸ್ಟರ್​​​​ಗಳು ರಾರಾಜಿಸುತ್ತಿವೆ.ಇನ್ನು ದಚ್ಚು ಅಭಿಮಾನಿಗಳು ಈಗಾಗಲೇ ದರ್ಶನ್ ಹೆಸರಲ್ಲಿ ಹಚ್ಚೆ ಹಾಕಿಸಿಕೊಂಡು ಅಭಿಮಾನ ತೋರಿರುವುದು ಗೊತ್ತೇ ಇದೆ.ಇದೀಗ ಅಭಿಮಾನಿಗಳು, ಕಾರುಗಳ ಬ್ಯಾನೆಟ್ ಮೇಲೆ 'ರಾಬರ್ಟ್ ಪೋಸ್ಟರ್' ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ. ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ. ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಶನ್, ರವಿಶಂಕರ್ ಸೇರಿದಂತೆ ಅನೇಕ ಖ್ಯಾತ ನಟರು 'ರಾಬರ್ಟ್' ಚಿತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿರುವ 'ರಾಬರ್ಟ್' ಸಿನಿಮಾ ಮಾರ್ಚ್ 11ಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.