ETV Bharat / sitara

ವಕೀಲ್ ಸಾಬ್ vs ದರ್ಶನ್​: ಸಂತೋಷ್ ಥಿಯೇಟರ್​​ನಲ್ಲಿ 'ರಾಬರ್ಟ್​' ಫ್ಯಾನ್ಸ್ ಹವಾ - ವಕೀಲ್ ಸಾಬ್ ಸಿನಿಮಾ

'ರಾಬರ್ಟ್​' ಚಿತ್ರ ಎತ್ತಂಗಡಿಯಾಗುತ್ತಿಲ್ಲ, ಅದು ಎಂದಿನಂತೆ ಪ್ರದರ್ಶನವಾಗುತ್ತಿದೆ ಎಂದು ಕಾರ್ತಿಕ್​ ಗೌಡ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರವನ್ನು ಕಾರ್ತಿಕ್​ ತಮ್ಮ ಕೆಆರ್​ಜಿ ಕನೆಕ್ಟ್ಸ್​ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ಕಾರ್ತಿಕ್​​, 'ವಕೀಲ್​ ಸಾಬ್​' ಚಿತ್ರವು ಭೂಮಿಕಾದಲ್ಲಿ ಬಿಡುಗಡೆಯಾಗುತ್ತಿದೆ ಎಂದರು.

Roberrt
Roberrt
author img

By

Published : Apr 6, 2021, 11:50 PM IST

ದರ್ಶನ್​ ಅಭಿನಯದ 'ರಾಬರ್ಟ್​' ಸಿನಿಮಾ ಇತ್ತೀಚೆಗಷ್ಟೇ 25 ದಿನಗಳನ್ನು ಮುಗಿಸಿದೆ. ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಚಿತ್ರವು ಮುಖ್ಯ ಚಿತ್ರಮಂದಿರವಾದ ಸಂತೋಷ್​ನಿಂದ ಎತ್ತಂಗಡಿಯಾಗಲಿದೆ ಎಂಬ ಸುದ್ದಿಯೊಂದು ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

ಏಪ್ರಿಲ್​ 9ರಂದು ತೆಲುಗು ನಟ ಪವನ್​ ಕಲ್ಯಾಣ್​ ಅವರ 'ವಕೀಲ್​ ಸಾಬ್​' ಚಿತ್ರವು ಸಂತೋಷ್​ ಸೇರಿದಂತೆ ರಾಜ್ಯಾದ್ಯಂದ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ಆಗುತ್ತಿರುವಾಗ, ಆ ಚಿತ್ರವನ್ನು ಕಿತ್ತು ತೆಲುಗು ಚಿತ್ರವೊಂದನ್ನು ಪ್ರದರ್ಶಿಸುವ ಔಚಿತ್ಯವೇನಿದೆ ಎಂಬ ಪ್ರಶ್ನೆ ಎದ್ದಿತ್ತಲ್ಲದೆ, ದರ್ಶನ್​ ಅಭಿಮಾನಿಗಳನ್ನು ಕೆರಳಿಸಿತ್ತು.

ಆದರೆ, 'ರಾಬರ್ಟ್​' ಚಿತ್ರ ಎತ್ತಂಗಡಿಯಾಗುತ್ತಿಲ್ಲ, ಅದು ಎಂದಿನಂತೆ ಪ್ರದರ್ಶನವಾಗುತ್ತಿದೆ ಎಂದು ಕಾರ್ತಿಕ್​ ಗೌಡ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರವನ್ನು ಕಾರ್ತಿಕ್​ ತಮ್ಮ ಕೆಆರ್​ಜಿ ಕನೆಕ್ಟ್ಸ್​ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ಕಾರ್ತಿಕ್​​, 'ವಕೀಲ್​ ಸಾಬ್​' ಚಿತ್ರವು ಭೂಮಿಕಾದಲ್ಲಿ ಬಿಡುಗಡೆಯಾಗುತ್ತಿದ್ದು, 'ರಾಬರ್ಟ್​' ಬಿಡುಗಡೆಗೆ ಅದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬುಕ್​ಮೈಶೋನಲ್ಲಿ ಹೊಸದಾಗಿ ಅಪ್​ಡೇಟ್​ ಆಗಿಲ್ಲವಾದ್ದರಿಂದ, ಗೊಂದಲವಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನು, ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಸಹ ಚಿತ್ರವು ಇನ್ನಷ್ಟು ವಾರಗಳ ಕಾಲ ಸಂತೋಷ್​ ಚಿತ್ರಮಂದಿರದಲ್ಲಿ ಮುಂದುವರೆಯಲಿದೆ ಮತ್ತು ಸದ್ಯಕ್ಕೆ ಎತ್ತಂಗಡಿಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಅಭಿಮಾನಿಗಳು ಶಾಂತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.