ಮುಂಬೈ:ಬಾಲಿವುಡ್ನ ನಟರಾದ ಟೈಗರ್ ಶ್ರಾಫ್, ಸೋನುಸೂದ್ ಮತ್ತು ರಿತೀಶ್ ದೇಶಮುಖ್ ಹಾಗೂ ಅವರ ಪತ್ನಿ ಜೆನೆಲಿಯಾ ದೇಶಮುಖ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ಕ್ಯಾಮೆರಾದ ಕಣ್ಣಿಗೆ ಸೆರೆಯಾಗಿದ್ದಾರೆ.
ಬಾಲಿವುಡ್ ನಟ ಟೈಗರ್ ಶ್ರಾಫ್ , ದಿಶಾ ಪಟಾನಿ ಅವರೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಇವರು ‘ಹಿರೋಪಂತಿ 2’ ಚಿತ್ರದಲ್ಲಿ ನಟಿಸಲಿದ್ದಾರೆ.
ಈ ನಡುವೆ ಎಲ್ಲರ ನೆಚ್ಚಿನ ನಟ ಸೋನು ಸೂದ್ ವರ್ಸೋವಾದ ದೇವಾಲಯವೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಕ್ಯಾಮರಾದಲ್ಲಿ ಸೆರೆಯಾಗಿದ್ದು, ‘ಆಚಾರ್ಯ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಓದಿ:ಫಿಲ್ಮ್ ಸಿಟಿ ಸುತ್ತಮುತ್ತ ಬಾಲಿವುಡ್ ನಟಿಯರ ಸುತ್ತಾಟ: ಕ್ಯಾಮೆರಾದಲ್ಲಿ ಸೆರೆ
ಇನ್ನೂ ಬಾಂದ್ರಾದಲ್ಲಿ ಚಿತ್ರೀಕರಣ ನಡೆಯುವ ವೇಳೆ ರಿತೀಶ್ ದೇಶಮುಖ್ ಮತ್ತು ಪತ್ನಿ ಜೆನೆಲಿಯಾ ದೇಶ್ಮುಖ್ ಅವರು ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.