ETV Bharat / sitara

ರಿಕ್ಕಿ ಚಿತ್ರಕ್ಕೆ ಐದು ವರ್ಷ: ಖುಷಿ ಹಂಚಿಕೊಂಡ ರಕ್ಷಿತ್​​-ರಿಷಭ್​​​ - ರಕ್ಷಿತ್​​ ಶೆಟ್ಟಿ

ರಿಷಭ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ 'ರಿಕ್ಕಿ' ತೆರೆ ಕಂಡು ಬರೋಬ್ಬರಿ 5 ವರ್ಷಗಳು ಪೂರೈಸಿವೆ. ಈ ಸಂತಸವನ್ನು ರಿಷಭ್​ ಮತ್ತು ರಕ್ಷಿತ್​​ ಶೆಟ್ಟಿ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಿಕ್ಕಿ ಚಿತ್ರಕ್ಕೆ ಐದು ವರ್ಷ : ಖುಷಿ ಹಂಚಿಕೊಂಡ ರಕ್ಷಿತ್​​-ರಿಷಭ್​​​ರಿಕ್ಕಿ ಚಿತ್ರಕ್ಕೆ ಐದು ವರ್ಷ : ಖುಷಿ ಹಂಚಿಕೊಂಡ ರಕ್ಷಿತ್​​-ರಿಷಭ್​​​
ರಿಕ್ಕಿ ಚಿತ್ರಕ್ಕೆ ಐದು ವರ್ಷ : ಖುಷಿ ಹಂಚಿಕೊಂಡ ರಕ್ಷಿತ್​​-ರಿಷಭ್​​​
author img

By

Published : Jan 22, 2021, 3:15 PM IST

ಇಂದಿಗೆ ರಿಷಭ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ 'ರಿಕ್ಕಿ' ತೆರೆ ಕಂಡು ಬರೋಬ್ಬರಿ 5 ವರ್ಷಗಳು ಪೂರೈಸಿವೆ. ಈ ಸಂತಸವನ್ನು ರಿಷಭ್​ ಮತ್ತು ರಕ್ಷಿತ್​​ ಶೆಟ್ಟಿ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

rishabh shetty tweet about  Ricky  movie
ರಿಷಭ್​​​

ಟ್ವಿಟರ್​​​ನಲ್ಲಿ ಸುದೀರ್ಘವಾಗಿ ಬೆರೆದಿರುವ ರಿಷಭ್​​, "ಬಹು ವರ್ಷದ ಕನಸು, ಚೊಚ್ಚಲ ಕೂಸು, ರಿಕ್ಕಿ ಬಿಡುಗಡೆಯಾಗಿ ಇಂದಿಗೆ 5 ವರ್ಷ. ಮೊದಲ ಸಿನಿಮಾ ಕಲಿಸಿದ ಪಾಠ, ಕೊಟ್ಟ ಅನುಭವ ಅಪಾರ. ರಕ್ಷಿತ್, ಹರಿಪ್ರಿಯ, ಪ್ರಮೋದ್, ಅಚ್ಯುತಣ್ಣರಂತಹ ಅದ್ಭುತ ನಟರ ಜೊತೆ ಕೆಲಸ ಮಾಡಿದ್ದು ಅದೃಷ್ಟ. ಅವರೆಲ್ಲ ಇಂದಿಗೂ ಜೀವದ ಗೆಳೆಯರು. ನಿರ್ಮಾಪಕರಾದ ಎಸ್‍.ವಿ.ಬಾಬು ಅವರಿಗೆ ಸದಾ ಋಣಿ. ಎಲ್ಲಕ್ಕಿಂತ ಮಿಗಿಲಾಗಿ ಚಿತ್ರವನ್ನು ಮೆಚ್ಚಿ, ಬೆನ್ನು ತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದಗಳು" ಎಂದಿದ್ದಾರೆ.

rishabh shetty tweet about  Ricky  movie
ಹರಿಪ್ರಿಯಾ

ಇದೇ ವೇಳೆ ರಕ್ಷಿತ್​​​​ ಕೂಡ ಟ್ವೀಟ್​​ ಮಾಡಿದ್ದು, ರಿಕ್ಕಿ ಚಿತ್ರ ರಿಲೀಸ್​​ ಆಗಿ ಐದು ವರ್ಷ ಪೂರೈಸಿದೆ. ಈ ಸಿನಿಮಾದಿಂದ ನಾವು ಕಲಿತಿರುವ ಪಾಠ ಮತ್ತು ಅನುಭವವನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.

rishabh shetty tweet about  Ricky  movie
ರಿಷಭ್​​ ಟ್ವೀಟ್​​​

ಇನ್ನು ರಿಷಭ್​​ ಬತ್ತಳಿಕೆಯಿಂದ ಬಂದ ಈ ಸಿನಿಮಾಲ್ಲಿ ರಕ್ಷಿತ್​​​ ಶೆಟ್ಟಿಗೆ ಜೋಡಿಯಾಗಿ ನೀರ್​​ ದೋಸೆ ಬೆಡಗಿ ಹರಿಪ್ರಿಯಾ ನಟಿಸಿದ್ದಾರೆ. ಈ ಸಿನಿಮಾಕ್ಕೆ ಎಸ್‍.ವಿ.ಬಾಬು ಬಂಡವಾಳ ಹಾಕಿದ್ದು, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ರವಿ ಕಾಳೆ, ವೀಣಾ ಸುಂದರ್, ಸಾಧು ಕೋಕಿಲಾ ಸೇರಿದಂತೆ ಹಲವರ ತಾರಾಬಳಗವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.