ETV Bharat / sitara

'ದಾರಿ ಯಾವುದಯ್ಯಾ ವೈಕುಂಠಕೆ' ಶೀರ್ಷಿಕೆ ಅನಾವರಣ ಮಾಡಿದ ರಿಷಭ್ ಶೆಟ್ಟಿ

ಸಾಕಷ್ಟು ಸಿನಿಮಾಗಳಲ್ಲಿ ಖಳನಟ ಆಗಿ 'ಹಫ್ತಾ' ಚಿತ್ರದ ಮೂಲಕ ನಾಯಕನಾದ ವರ್ಧನ್ ತೀರ್ಥಹಳ್ಳಿ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ, ನಟ ರಿಷಭ್ ಶೆಟ್ಟಿ ಈ ಸಿನಿಮಾದ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

author img

By

Published : Jan 21, 2020, 10:14 AM IST

Daari Yavudaya Vaikunatke movie
'ದಾರಿ ಯಾವುದಯ್ಯಾ ವೈಕುಂಠಕೆ'

'ದಾರಿ ಯಾವುದಯ್ಯಾ ವೈಕುಂಠಕೆ' ಇದು ಪುರಂದರದಾಸರು ಹಾಡಿದ ಸಾಲುಗಳು. ಇದೀಗ ಈ ಹೆಸರಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ. ಖ್ಯಾತ ನಿರ್ದೇಶಕ, ನಟ ರಿಷಭ್ ಶೆಟ್ಟಿ ಈ ಸಿನಿಮಾದ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಶ್ರೀ ಬಸವೇಶ್ವರ ಕ್ರಿಯೇಷನ್ ಬ್ಯಾನರ್ ಅಡಿ ಶರಣಪ್ಪ ಎಂ. ಕೋಟಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. 30 ದಿನಗಳಲ್ಲಿ ಬೆಂಗಳೂರು, ರಾಮನಗರ, ಮಂಡ್ಯ ಸುತ್ತ ಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರತಂಡ ಮಾಹಿತಿ ನೀಡಿದೆ. 'ಕೃಷ್ಣ ಗಾರ್ಮೆಂಟ್ಸ್' ಚಿತ್ರವನ್ನು ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಯಾವುದೇ ಕೆಲಸ ಇಲ್ಲದೆ, ಉಂಡಾಡಿ ಗುಂಡನಂತೆ ತಿರುಗುವ ಯುವಕನೊಬ್ಬ ಆಕಸ್ಮಿಕವಾಗಿ ಸ್ಮಶಾನಕ್ಕೆ ಭೇಟಿ ನೀಡುತ್ತಾನೆ. ಅಲ್ಲಿಗೆ ಹೋಗಿಬಂದ ಮೇಲೆ ಅವರ ಜೀವನದಲ್ಲಿ ಬದಲಾವಣೆ ಆರಂಭವಾಗುತ್ತದೆ. ಇದು ಈ ಚಿತ್ರದ ಕಥೆ.

ಸಾಕಷ್ಟು ಸಿನಿಮಾಗಳಲ್ಲಿ ಖಳನಟ ಆಗಿ 'ಹಫ್ತಾ' ಚಿತ್ರದ ಮೂಲಕ ನಾಯಕನಾದ ವರ್ಧನ್ ತೀರ್ಥಹಳ್ಳಿ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 'ತಿಥಿ' ಖ್ಯಾತಿಯ ಪೂಜಾ ಈ ಚಿತ್ರದ ನಾಯಕಿ. ಉಳಿದಂತೆ ಬಲರಾಜವಾಡಿ, ಶೀಬಾ, ಅರುಣ್ ಮೂರ್ತಿ, ಸ್ಪಂದನ, ಪ್ರಶಾಂತ್ ರಾವ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ನಿತಿನ್ ಛಾಯಾಗ್ರಹಣ ಹಾಗೂ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ.

ರಿಷಬ್ ಶೆಟ್ಟಿ ಅನಾವರಣ ಮಾಡಿದ್ರು ದಾರಿ ಯಾವುದಯ್ಯ ವೈಕುಂಟಕ್ಕೆ ಶೀರ್ಷಿಕೆ

ಒಂದು ದಾಸರ ಪದದ ಸಾಲು ದಾರಿ ಯಾವುದಯ್ಯ ವೈಕುಂಟಕ್ಕೆ ಈಗ ಸಿನಿಮಾ ಶೀರ್ಷಿಕೆ ಆಗಿ ಬರುತ್ತಿದೆ. ಈ ಶೀರ್ಷಿಕೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅನಾವರಣ ಮಾಡಿ ಹೊಸ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಶ್ರೀ ಬಸವೇಶ್ವರ ಕ್ರಿಯೇಷನ್ ಅಡಿಯಲ್ಲಿ ಶರಣಪ್ಪ ಎಂ ಕೋಟಗಿ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರೀಕರಣ ಶುರು ಆಗಲಿದೆ. 30 ದಿವಸದಲ್ಲಿ ಬೆಂಗಳೂರು, ರಾಮನಗರ, ಮಂಡ್ಯ ಸುತ್ತ ಮುತ್ತ ಚಿತ್ರೀಕರಣ ಎರಡು ಹಂತದಲ್ಲಿ ನಡೆಸಲಾಗುವುದು. ಕೃಷ್ಣ ಗಾರ್ಮೆಂಟ್ಸ್ ಚಿತ್ರ ನಿರ್ದೇಶನ ಮಾಡಿದ ಸಿದ್ದು ಪೂರ್ಣಚಂದ್ರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಸಹ ಮಾಡುತ್ತಿದ್ದಾರೆ.

ಉಂಡಾಡಿ ಗುಂಡ, ಯಾವುದೇ ಕೆಲಸ ಇಲ್ಲದೆ ಇದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬೇಟಿ ಕೊಡುವ ಸಂದರ್ಭ ಬರುತ್ತದೆ. ಇಲ್ಲಿಗೆ ಬೇಟಿ ನೀಡಿದ ಮೇಲೆ ಅವರ ಜೀವನದಲ್ಲಿ ಪರಿವರ್ತನೆ ಶುರು ಆಗುತ್ತದೆ.

ಹಲವಾರು ಸಿನಿಮಾಗಳಲ್ಲಿ ಖಳ ನಟ ಆಗಿ ಅಭಿನಯಿಸಿರುವ ವರ್ಧನ್ ಈ ಚಿತ್ರದ ಮೂಲಕ ನಾಯಕ ಆಗುತ್ತಿದ್ದಾರೆ. ತಿಥಿ ಖ್ಯಾತಿಯ ಪೂಜಾ ನಾಯಕಿ, ಬಲರಾಜವಾಡಿ, ಶೀಬಾ, ಅರುಣ್ ಮೂರ್ತಿ, ಸ್ಪಂದನ, ಪ್ರಶಾಂತ್ ರಾವ್ ಹಾಗೂ ಇತರರು ತಾರಗಣದಲ್ಲಿದ್ದಾರೆ. ನಿತಿನ್ ಛಾಯಾಗ್ರಹಣ ಹಾಗೂ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.