ಮಂಡ್ಯ ಜಿಲ್ಲೆಯಾದ್ಯಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಚುನಾವಣೆ ಪ್ರಚಾರ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಲಗೈ ನೋವು ಕಾಣಿಸಿಕೊಂಡಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ನಡೆದಿದ್ದ ಕಾರು ಅಪಘಾತದಲ್ಲಿ ದಚ್ಚು ಕೈಗೆ ಗಂಭೀರ ಗಾಯವಾಗಿತ್ತು. ಕೆಲ ವಾರಗಳವರೆಗೆ ವಿಶ್ರಾಂತಿ ಪಡೆದಿದ್ದ ದರ್ಶನ್, ಸಂಪೂರ್ಣವಾಗಿ ಗುಣಮುಖರಾಗಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಂಡ್ಯದಲ್ಲಿ ಸುಮಲತಾ ಪರ ಮತಬೇಟೆ ನಡೆಸುತ್ತಿರುವ ಅವರು, ಸತತ ನಾಲ್ಕು ದಿನಗಳಿಂದ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಪರಿಣಾಮ ದಚ್ಚುಗೆ ಬೆನ್ನು ಹಾಗೂ ಕೈ ನೋವು ಕಾಣಿಸಿಕೊಂಡಿದೆ.
ನಾಗಮಂಗಲ ಟೌನ್ನಿಂದ ಪ್ರಚಾರ ಮುಗಿಸಿ ಹೋಗುವಾಗ ಅಭಿಮಾನಿಗಳು ಮುಗಿ ಬಿದ್ದಿದ್ದರಿಂದಲೂ ಕೈಗೆ ಪೆಟ್ಟಾಗಿದೆಯಂತೆ. ಪ್ರಚಾರದ ವೇಳೆ ಸಾಕಷ್ಟು ಅಭಿಮಾನಿಗಳು ಪದೆಪದೇ ಕೈ ಕುಲುಕಿದ್ದರಿಂದ ದರ್ಶನ್ ಅವರಿಗೆ ಕೈ ನೋವು ಬಂದಿದೆಯಂತೆ.
ಇನ್ನು ಚುನಾವಣೆ ಪ್ರಚಾರದಿಂದ ಕೊಂಚ ಬ್ರೇಕ್ ಪಡೆದಿರುವ ದಚ್ಚು-ಯಶ್ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮತ್ತೆ 10 ರಿಂದ ಅಖಾಡಕ್ಕಿಳಿದು ಸುಮಲತಾ ಅಂಬರೀಶ್ ಪರ ಮತಯಾಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.