ETV Bharat / sitara

ಆ್ಯಕ್ಷನ್ ಮಾಡಲು ರೆಡಿಯಾದ್ರು 'ಸೂರ್ಯಕಾಂತಿ' ಹುಡುಗಿ ರೆಜಿನಾ ಕ್ಯಾಸಂದ್ರ - Chakra movie release in OTT

ರೆಜಿನಾ ಕ್ಯಾಸಂದ್ರ ತಮಿಳು, ತೆಲುಗು ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿರುವ ನಟಿ. ರೆಜಿನಾ ಸ್ಟಾರ್ ನಟಿಯಾಗುವ ಮುನ್ನ ಕನ್ನಡದಲ್ಲಿ ಕೂಡಾ ನಟಿಸಿದ್ದರು ಎಂಬ ವಿಚಾರ ಯಾರಿಗೂ ತಿಳಿದಿಲ್ಲ. 2010 ರಲ್ಲಿ ಬಿಡುಗಡೆಯಾಗಿದ್ದ 'ಸೂರ್ಯಕಾಂತಿ' ಚಿತ್ರದಲ್ಲಿ ರೆಜಿನಾ ಚೇತನ್ ಕುಮಾರ್ ಜೊತೆ ನಟಿಸಿದ್ದರು.

Regina Cassandra
ರೆಜಿನಾ ಕ್ಯಾಸಂದ್ರ
author img

By

Published : Jul 25, 2020, 1:20 PM IST

'ಸೂರ್ಯಕಾಂತಿ' ಚಿತ್ರದ ನಂತರ ಮತ್ತೆ ರೆಜಿನಾ ಕನ್ನಡದಲ್ಲಿ ನಟಿಸಲಿಲ್ಲ. ಈ ಸಿನಿಮಾವನ್ನು ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದು ಇಳಯರಾಜ ಸಂಗೀತ ನೀಡಿದ್ದರು. ಈ ಸಿನಿಮಾ ಯಶಸ್ವಿಯಾಗಲಿಲ್ಲ. ಆದರೆ ರೆಜಿನಾ ಮಾತ್ರ ತಮ್ಮ ಯಶಸ್ವಿ ಪಯಣವನ್ನು ಮುಂದುವರೆಸಿದ್ದಾರೆ. ಇದೇ ಮೊದಲ ಬಾರಿಗೆ ರೆಜಿನಾ ಆ್ಯಕ್ಷನ್ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶಾಲ್ ಜೊತೆ 'ಚಕ್ರ' ಎಂಬ ಸಿನಿಮಾದಲ್ಲಿ ರೆಜಿನಾ ನಟಿಸಿದ್ದು ಈ ಚಿತ್ರ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸಿದ್ಧವಾಗಿದೆ.

Regina Cassandra
ರೆಜಿನಾ ಕ್ಯಾಸಂದ್ರ

ಎಂ.ಎಸ್​. ಆನಂದ್ ನಿರ್ದೇಶನದ ಚಿತ್ರದಲ್ಲಿ ಆನ್​​ಲೈನ್ ಕ್ರೈಂ ಬಗ್ಗೆ ತೋರಿಸಲಾಗುವುದು ಎನ್ನಲಾಗಿದೆ. ಈ ಚಿತ್ರದಲ್ಲಿ ಸೃಷ್ಟಿ ಢಾಂಗೆ ಹಾಗೂ ಕನ್ನಡದ ನಟಿ ಶ್ರದ್ದಾ ಶ್ರೀನಾಥ್ ಕೂಡಾ ಇದ್ದಾರೆ. ಯುವನ್ ಶಂಕರ್ ರಾಜ ಸಂಗೀತ 'ಚಕ್ರ' ಸಿನಿಮಾಗೆ ಇದೆ. ಬಾಲಸುಬ್ರಮಣಿಯನ್​ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು ವಿಶಾಲ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್​​ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಥ್ರಿಲ್ಲರ್ ಚಿತ್ರದಲ್ಲಿ ಮನೋಬಲ ಹಾಗೂ ರೋಬೊ ಶಂಕರ್ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • " class="align-text-top noRightClick twitterSection" data="">

ನಟ ವಿಶಾಲ್​ಗೆ ಕೂಡಾ ಬೆಂಗಳೂರಿನೊಂದಿಗೆ ಅವಿನಾಭಾವ ಸಂಬಂಧವಿದೆ. ಇವರ ತಂದೆ ಜಿ.ಕೆ. ರೆಡ್ಡಿ ಬೆಂಗಳೂರಿನವರು. 'ಚಕ್ರ' ಸಿನಿಮಾದ ಟ್ರೇಲರ್ ಜನವರಿಯಲ್ಲೇ ಬಿಡುಗಡೆಯಾಗಿತ್ತು. ಸಿನಿಮಾ ಬಿಡುಗಡೆಯಾಗುವ ವೇಳೆಗೆ ಕೊರೊನಾ ಸಮಸ್ಯೆ ಆರಂಭವಾಯ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.