ETV Bharat / sitara

ಅಂಬರೀಶ್​ರ 11ನೇ ತಿಂಗಳ ಪುಣ್ಯತಿಥಿ ಆಚರಿಸಿದ ಕುಟುಂಬ - ರೆಬಲ್ ಸ್ಟಾರ್ ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ ಆಚರಣೆ

ಅಂಬರೀಶ್​​ ಕುಟುಂಬದವರು ಸಮಾಧಿಗೆ ಹೂವಿನ ಅಲಂಕಾರ ಮಾಡಿ ಅಂಬಿಗೆ ಇಷ್ಟವಾದ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಅಭಿಷೇಕ್ ಹಾಗೂ ಸುಮಲತಾ, ಅಭಿಮಾನಿಗಳಿಗೆ ಅನ್ನದಾನ ಮಾಡಿದರು.

ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ
author img

By

Published : Oct 24, 2019, 7:20 PM IST

Updated : Oct 24, 2019, 9:54 PM IST

ರೆಬಲ್ ಸ್ಟಾರ್ ಅಂಬರೀಶ್​ ನಿಧನರಾಗಿ ಇಂದಿಗೆ 11 ತಿಂಗಳು ಪೂರ್ಣಗೊಂಡಿದೆ. ಪ್ರತಿ ತಿಂಗಳಿನಂತೆ ಈ ಬಾರಿ ಕೂಡಾ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಇಬ್ಬರೂ ಕುಟುಂಬಸಹಿತರಾಗಿ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ 11ನೇ ತಿಂಗಳ ಪುಣ್ಯತಿಥಿ ಆಚರಿಸಿದ್ದಾರೆ.

ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ ಆಚರಣೆ

ಅಂಬಿ ಕುಟುಂಬದೊಂದಿಗೆ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಕೂಡಾ ಹಾಜರಿದ್ದರು. ಅಂಬಿ ಕುಟುಂಬದವರು ಸಮಾಧಿಗೆ ಹೂವಿನ ಅಲಂಕಾರ ಮಾಡಿ ಅಂಬಿ ನೆಚ್ಚಿನ ತಿಂಡಿಗಳನ್ನು ಇಟ್ಟು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಅಭಿಷೇಕ್ ಹಾಗೂ ಸುಮಲತಾ ಅಭಿಮಾನಿಗಳಿಗೆ ಅನ್ನದಾನ ಮಾಡಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್​​, ಅಂಬರೀಶ್ ನಮ್ಮನ್ನಗಲಿ ಇಷ್ಟು ಬೇಗ 11 ತಿಂಗಳಾಯಿತು ಎಂದರೆ ನಂಬಲಾಗುತ್ತಿಲ್ಲ. ಅವರು ಇಲ್ಲೇ ಎಲ್ಲೋ ನಮ್ಮೊಂದಿಗೆ ಇದ್ದಾರೆ ಎನ್ನಿಸುತ್ತಿದೆ. ಅವರ ಮಾತುಗಳು, ಅವರು ಮಾಡಿದ ಕೆಲಸಗಳನ್ನು ಎಲ್ಲಿ ಹೋದರೂ ಅಭಿಮಾನಿಗಳು ನೆನಪಿಸುತ್ತಿರುತ್ತಾರೆ. ಅದರಿಂದ ನನಗೆ ಬಹಳ ಹೆಮ್ಮೆಯಾಗುತ್ತದೆ ಎಂದು ಸುಮಲತಾ ಹೇಳಿದರು.

Intro:ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನಗಲಿ ಇಂದಿಗೆ ೧೧ ತಿಂಗಳು ಪೂರ್ಣಗೊಂಡಿದ್ದು, ಪ್ರತಿತಿಂಗಳಿನಂತೆ ಈ ತಿಂಗಳು ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಕುಟುಂಬ ಸಮೇತರಾಗಿ ಆಗಮಿಸಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾದಿಗೆ ಪೂಜೆ ಸಲ್ಲಿಸಿದರು‌.ಗುಲಾಭಿ ಹೂಗಳಿಂದ ಅಂಬಿ ಸಮಾದಿಯನ್ನು ಸಿಂಗರಿಸಿ ಅಂಬಿ ನೆಚ್ಚಿನ ತಿಂಡಿಗಳಿಟ್ಟು ಸುಮಲತಾ ಅಂಬರೀಶ್ ಸಮಾದಿಗೆ ಪೂಜೆ ಸಲ್ಲಿಸಿದ್ರು.

Body:ಇನ್ನೂ ಇದೇ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್,
ಹಿರಿಯ ನಟ ದೊಡ್ಡಣ್ಣ ಹಾಗೂ ನೂರಾರು ಅಂಬರೀಶ್ ಅಭಿಮಾನಿಗಳ ಸಮಾದಿ ಬಳಿ‌ ಉಪಸ್ಥಿತರಿದ್ದರು. ಸಮಾದಿ‌ಗೆ ಪೂಜೆ ಸಲ್ಲಿಸಿದ ಸುಮಲತಾ ಹಾಗೂ ಅಭಿಷೇಕ್ ಅನ್ನದಾನ ಮಾಡಿದರು. ನಂತರ ಮಾತನಾಡಿದ ಸುಮಲತಾ ಅಂಬರೀಶ್ ನಮ್ಮನಗಲಿ ೧೧ ತಿಂಗಳು ಕಳೆದಿದ್ರು ಅವರು ನಮ್ಮಲ್ಲೇ ಇದ್ದಾರೆ ಎಂಬಂತಿದೆ. ನಾವು ಎಲ್ಲೇ ಹೋದರು ಅವರ ನೆನೆಪು ಇದೆ. ಅವರ ನೆನಪು ಶಾಶ್ವತವಾಗಿ ಉಳಿಯುವಂತದಾಗಿದೆ ಇದು ತುಂಭಾ ಹೆಮ್ಮೆಯಾಗುತ್ತೆ ಎಂದು ಸುಮಲತಾ ಅಂಬರೀಶ್ ಅಂಬಿಯನ್ನು ನೆನೆದರು.

ಸತೀಶ ಎಂಬಿ.

Conclusion:
Last Updated : Oct 24, 2019, 9:54 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.