ETV Bharat / sitara

ಸುಮಲತಾ ಹುಟ್ಟುಹಬ್ಬದಂದು ಅಂಬಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರೆಬಲ್ ಬ್ರದರ್ಸ್ - Rebal brothers dance for Ambi film

ಈ ಬಾರಿ ಸುಮಲತಾ ಬಹಳ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕೆಲವೇ ಆಪ್ತರಿಗಾಗಿ ಸುಮಲತಾ ಅಂಬರೀಶ್​ ಚಿಕ್ಕ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ದರ್ಶನ್​​​​​, ಅಭಿಷೇಕ್​​​ ಹಾಗೂ ಸುಮಲತಾ ಮೂವರೂ ಅಂಬರೀಶ್​​​​​​ ಅಭಿನಯದ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

sumalata ambareesh birthday party
ಸುಮಲತಾ ಬರ್ತ್​ಡೇ ಪಾರ್ಟಿ
author img

By

Published : Sep 12, 2020, 10:29 AM IST

ಈ ನವೆಂಬರ್​​​​​ಗೆ ರೆಬಲ್​ ಸ್ಟಾರ್ ನಮ್ಮನ್ನು ಅಗಲಿ 2 ವರ್ಷಗಳು ತುಂಬಲಿದೆ. ಅಂಬರೀಶ್ ಕುಟುಂಬ ಹಾಗೂ ಅಭಿಮಾನಿಗಳು ನಿಧಾನವಾಗಿ ಅಂಬಿ ಅಗಲಿದ ದು:ಖದಿಂದ ಹೊರ ಬರುತ್ತಿದ್ದಾರೆ. ಆದರೂ ಸುಮಲತಾ, ಅಭಿಷೇಕ್​​​​​ ಹಾಗೂ ಅಂಬಿ ಆಪ್ತರು ಅವರನ್ನು ಪ್ರತಿದಿನ ನೆನೆಯುತ್ತಲೇ ಜೀವನ ಸಾಗಿಸುತ್ತಿದ್ದಾರೆ.

ಸುಮಲತಾ ಅಂಬರೀಶ್ ಬರ್ತ್​ಡೇ ಪಾರ್ಟಿ

ಇತ್ತೀಚೆಗಷ್ಟೇ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್​ ಹುಟ್ಟುಹಬ್ಬಕ್ಕೆ ಎಲ್ಲರೂ ಶುಭ ಕೋರಿದ್ದರು. ಆದರೆ ಸುಮಲತಾ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಪ್ತರಿಗಾಗಿ ಸುಮಲತಾ ಚಿಕ್ಕ ಪಾರ್ಟಿಯೊಂದನ್ನು ಅರೇಂಜ್ ಮಾಡಿದ್ದರು. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಆಗಮಿಸಿದ್ದರು. ಈ ಸಮಯದಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ 'ಏ ಜಲೀಲ ಕನ್ವರ್ ಲಾಲ' ಹಾಡಿಗೆ ಸುಮಲತಾ, ಅಭಿಷೇಕ್ ಹಾಗೂ ದರ್ಶನ್ ಮೂವರೂ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

sumalata ambareesh birthday party
ದರ್ಶನ್​​ , ಅಭಿಷೇಕ್

ದರ್ಶನ್​​ಗೆ ರೆಬಲ್ ಸ್ಟಾರ್ ಕುಟುಂಬ ಎಂದರೆ ಬಹಳ ಗೌರವ. ಅಂಬಿಯನ್ನು ದರ್ಶನ್ ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಅಂಬಿ ನಿಧನರಾದಾಗ ವಿದೇಶದಲ್ಲಿ ಚಿತ್ರೀಕರಣದಲ್ಲಿ ಇದ್ದ ದರ್ಶನ್ ಶೂಟಿಂಗ್ ಕ್ಯಾನ್ಸಲ್ ಮಾಡಿ ಅಂಬಿ ಅಂತಿಮ ದರ್ಶನ ಪಡೆಯಲು ಬಂದಿದ್ದರು. 'ಬುಲ್ ಬುಲ್' ಚಿತ್ರದಲ್ಲಿ ಅಂಬರೀಶ್ ಹಾಗೂ ದರ್ಶನ್ ಜೊತೆಯಾಗಿ ನಟಿಸಿದ್ದರು. ಇದೀಗ ಅಂಬಿ ನಮ್ಮ ನಡುವೆ ಇಲ್ಲದಿದ್ದರೂ ಅವರ ನೆನಪು ಹಸಿರಾಗಿದೆ. ಅವರ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರೂ ಅಂಬಿಯನ್ನು ನೆನೆಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.