ಸೆಪ್ಟೆಂಬರ್ 18 ಉಪೇಂದ್ರ ಅಭಿಮಾನಿಗಳಿಗೆ ಹಬ್ಬದ ದಿನ. ಏಕೆಂದರೆ ಆ ದಿನ ಸ್ಯಾಂಡಲ್ವುಡ್ ಬುದ್ಧಿವಂತನ ಹುಟ್ಟಿದ ದಿನ. ಮೆಚ್ಚಿನ ನಟನ ಹುಟ್ಟುಹಬ್ಬ ಎಂದರೆ ಅಭಿಮಾನಿಗಳು ಬಹಳ ದಿನಗಳಿಂದಲೇ ತಯಾರಿ ಮಾಡಿಕೊಳ್ಳುತ್ತಾರೆ.
ಆ ದಿನ ಸಾಹಸಸಿಂಹ ವಿಷ್ಣುವರ್ಧನ್, ನಟಿ ಶೃತಿ ಹುಟ್ಟುಹಬ್ಬ ಕೂಡಾ. ಎಲ್ಲಾ ನಟರ ಅಭಿಮಾನಿಗಳು ಈಗಾಗಲೇ ಸೆಲಬ್ರೇಷನ್ಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಉಪೇಂದ್ರ ಅಭಿಮಾನಿಗಳು ಕೂಡಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಬರ್ತಡೇಯನ್ನು ಗ್ಯ್ರಾಂಡ್ ಆಗಿ ಆಚರಿಸಲು ಕಾಯುತ್ತಿದ್ದಾರೆ. ಆದರೆ ಉಪೇಂದ್ರ ಮಾತ್ರ ಅಭಿಮಾನಿಗಳಿಗೆ ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಮನವಿ ಮಾಡಿದ್ದಾರೆ. ಈ ಬಾರಿ ಕೇಕ್, ಹೂ, ಪಟಾಕಿ ತರಬೇಡಿ ಎಂದು ಮನವಿ ಮಾಡಿದ್ದಾರೆ. ಕಲಬುರಗಿಯ ಅಭಿಮಾನಿಯೊಬ್ಬರು ಉಪೇಂದ್ರ ಹುಟ್ಟುಹಬ್ಬಕ್ಕೆ ಇನ್ನೂ ಎರಡು ದಿನಗಳಿರುವಾಗಲೇ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಕಾಫಿಯೊಳಗೆ ಉಪ್ಪಿ ಚಿತ್ರ ಮೂಡಿಸಿ ಎರಡು ದಿನಗಳು ಮುನ್ನವೇ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ತಮ್ಮ ವಿಭಿನ್ನವಾದ ಚಿತ್ರಗಳ ಮೂಲಕವೇ ಉಪ್ಪಿ ವಿಭಿನ್ನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.