ETV Bharat / sitara

'ನಿನ್ನ ಸನಿಹಕೆ' ಸಿನಿಮಾ ನೋಡಿ ಅಣ್ಣಾವ್ರ ಮಕ್ಕಳು ಹೇಳಿದ್ದೇನು? - ರಾಘವೇಂದ್ರ ರಾಜ್​ಕುಮಾರ್

ಡಾ.ರಾಜ್​​ಕುಮಾರ್ ಮೊಮ್ಮಗಳಾದ ಧನ್ಯಾ ರಾಮ್​​ಕುಮಾರ್ ನಟಿಸಿದ 'ನಿನ್ನ ಸನಿಹಕೆ' ಚಿತ್ರವನ್ನು ನೋಡಿದ ಶಿವಣ್ಣ, ಅಪ್ಪು ಮತ್ತು ರಾಘಣ್ಣ ಅವರು ಆಕೆಯ ನಟನೆಯನ್ನು ಕೊಂಡಾಡಿದರು.

ನಿನ್ನ ಸನಿಹಕೆ
ನಿನ್ನ ಸನಿಹಕೆ
author img

By

Published : Oct 8, 2021, 1:56 PM IST

Updated : Oct 8, 2021, 3:20 PM IST

ಡಾ. ರಾಜ್​​ಕುಮಾರ್ ಮೊಮ್ಮಗಳು, ನಟ ರಾಮ್​ಕುಮಾರ್​ ಮಗಳಾದ ಧನ್ಯಾ ರಾಮ್​​ಕುಮಾರ್ ಹಾಗೂ ಸೂರಜ್ ಗೌಡ ನಟಿಸಿ, ನಿರ್ದೇಶನ ಮಾಡಿರೋ ಸಿನಿಮಾ 'ನಿನ್ನ ಸನಿಹಕೆ'.. ಟ್ರೈಲರ್ ಹಾಗೂ ಹಾಡುಗಳಿಂದಲೇ ಸಿಕ್ಕಾಪಟ್ಟೇ ಸದ್ದು ಮಾಡ್ತಿದ್ದ ಈ ಚಿತ್ರ ಇಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ನಿನ್ನೆ, 'ನಿನ್ನ ಸನಿಹಕೆ' ಚಿತ್ರತಂಡವು ಕನ್ನಡ ಚಿತ್ರರಂಗದ ಸ್ನೇಹಿತರಿಗೆ ಬೆಂಗಳೂರಿನ ಮಾಲ್​​ವೊಂದರಲ್ಲಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು.

ಈ ಶೋಗೆ ಅಣ್ಣಾವ್ರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ಯುವ ನಟ ವಿಕ್ರಮ್, ಶ್ರೀನಗರ ಕಿಟ್ಟಿ ಸೇರಿದಂತೆ 'ನಿನ್ನ ಸನಿಹಕೆ' ಚಿತ್ರತಂಡದ ಕಲಾವಿದರು ಹಾಗೂ ಚಿತ್ರರಂಗದ ಸ್ನೇಹಿತರು ನಿನ್ನ ಸನಿಹಕೆ ಸಿನಿಮಾ ನೋಡಿ ಮೆಚ್ಚಿಕೊಂಡರು.

'ನಿನ್ನ ಸನಿಹಕೆ' ಸಿನಿಮಾ ನೋಡಿ ಅಣ್ಣಾವ್ರ ಮಕ್ಕಳ ಪ್ರತಿಕ್ರಿಯೆ

ಶಿವಣ್ಣ, ಅಪ್ಪು ಮತ್ತು ರಾಘಣ್ಣ ಅವರು ಧನ್ಯಾ ರಾಮ್​​ಕುಮಾರ್ ಅವರ ಅಭಿನಯ ನೋಡಿ ಕೊಂಡಾಡಿದರು. ತಮ್ಮ ತಂಗಿ ಪೂರ್ಣಿಮಾ ಹಾಗೂ ನಟ ರಾಮ್​​ಕುಮಾರ್ ಮಗಳಾಗಿರೋ ಧನ್ಯಾಳ ನಟನೆ ನೋಡಿ ಕೊಂಚ ಭಾವುಕರಾದ ಶಿವರಾಜ್ ಕುಮಾರ್, ಇಡೀ ಚಿತ್ರತಂಡವನ್ನ ಅಭಿನಂದಿಸಿದರು. "ಕಲೆ ಅನ್ನೋದು ರಕ್ತಗತವಾಗಿ ಬಂದಿದೆ ಅನ್ನೋದಕ್ಕೆ ಧನ್ಯಾ ಅಷ್ಟು ಚೆನ್ನಾಗಿ ಅಭಿನಯಿಸಿರೋದೇ ಸಾಕ್ಷಿ. ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರು ತುಂಬಾ ಚೆನ್ನಾಗಿ ನಟಿಸಿದ್ದಾರೆ" ಎಂದರು.

ಇದನ್ನೂ ಓದಿ: ಚಿತ್ರಮಂದಿರದಲ್ಲಿ ವಿದ್ಯುತ್​ ಸಮಸ್ಯೆ: 'ನಿನ್ನ ಸನಿಹಕೆ' ಬಂದ ಪ್ರೇಕ್ಷಕರಿಗೆ ನಿರಾಶೆ

ಬಳಿಕ ಮಾತನಾಡಿದ ರಾಘಣ್ಣ, "ನಾವು ಹೆಚ್ಚು ಮಾತಾಡಿಸ್ರೆ ನಮ್ಮನೆಯವರನ್ನ ನಾವೇ ಹೊಗಳಿಕೊಂಡ ಹಾಗೆ ಇರತ್ತೆ. ಥಿಯೇಟರ್​ಗಳಿಗೆ ಬರುವ ಯಜಮಾನರು (ಅಭಿಮಾನಿಗಳು) ಆಶೀರ್ವಾದ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ. ಸಿನಿಮಾ ನೋಡಿ ಮನಸ್ಸನ್ನು ತುಂಬಿಕೊಂಡು ಹೋಗ್ತಾ ಇದೀವಿ. ಜನಗಳು ಏನಂತಾರೆ ಅದರ ಮೇಲೆ ಸಿನಿಮಾ ನಿಂತಿದೆ" ಎಂದರು.

"ಚಿಕ್ಕಂದಿನಲ್ಲಿ ಧನ್ಯಾಳನ್ನ ನಾನು ಎತ್ತಿ ಆಡಿಸಿದ್ದೀನಿ. ನಮ್ಮ ಮನೆಯ ಹುಡುಗಿ ಚಿತ್ರರಂಗಕ್ಕೆ ಬಂದಿದ್ದಾಳೆ. ಅವಳಿಗೆ, ನಿರ್ದೇಶಕ, ನಿರ್ಮಾಪಕ ಹಾಗೂ ಇಡೀ ಚಿತ್ರತಂಡದವರಿಗೆ ಒಳ್ಳೆದಾಗ್ಲಿ" ಎಂದು ಪುನೀತ್ ರಾಜ್​ಕುಮಾರ್ ಹಾರೈಸಿದರು.

Last Updated : Oct 8, 2021, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.