ETV Bharat / sitara

ಕೆಜಿಎಫ್​​ ಸಂಗೀತ ನಿರ್ದೇಶಕ ರವಿ ಬಸ್ರೂರ್​​ ಕಿಡ್ನಾಪ್​? ಅಪಹರಣದ ವಿಡಿಯೋ ವೈರಲ್​​! - ರವಿ ಬಸ್ರೂರು ಕಿಡ್ನಾಪ್​​

ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರನ್ನು ಆಗಂತುಕರು ಕಿಡ್ನಾಪ್​ ಮಾಡಿದ್ದಲ್ಲದೆ ಈ ಬಗ್ಗೆ ಅವರಿಗೆ ಕೊಟ್ಟಿರುವ ಚಿತ್ರಹಿಂಸೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ರವಿ ಬಸ್ರೂರ್​​​
author img

By

Published : Nov 10, 2019, 5:54 PM IST

ಕೆಜಿಎಫ್​​ ಸಿನಿಮಾಕ್ಕೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ರವಿ ಬಸ್ರೂರ್​​ ಅವರನ್ನು ಆಗಂತುಕರು ಅಪಹರಿಸಿದ್ದಲ್ಲದೆ ಈ ಬಗ್ಗೆ ಅವರಿಗೆ ಕೊಟ್ಟಿರುವ ಚಿತ್ರಹಿಂಸೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇತ್ತೀಚಿಗಷ್ಟೇ ಗಿರ್ಮಿಟ್​ ಸಿನಿಮಾ ರಿಲೀಸ್​ ಆಗಿ ದೇಶವೇ ಚಂದನವನದ ಕಡೆ ತಿರುಗುವಂತೆ ಮಾಡಿದವರು ರವಿ ಬಸ್ರೂರ್​. ಬರೋಬ್ಬರಿ 300 ಮಕ್ಕಳನ್ನು ಹಾಕಿಕೊಂಡು ಈ ಸಿನಿಮಾವನ್ನು ಮಾಡಿದ್ದು ಇದಕ್ಕೆ ಕಾರಣವಾಗಿತ್ತು. ಆದ್ರೆ ಇದ್ದಕ್ಕಿದ್ದಂತೆ ಈ ಅಪರಿಚಿತರು ನಿರ್ದೇಶಕರನ್ನು ಕಿಡ್ನಾಪ್​ ಮಾಡಿದ್ದು ಏಕೆ?

  • " class="align-text-top noRightClick twitterSection" data="">

ಅರೆ, ಇವರನ್ನ್ಯಾಕೆ ಕಿಡ್ನಾಪ್​ ಮಾಡಿದ್ರು ಅಂತ ಯೋಚ್ನೆ ಮಾಡಿದ್ರಾ? ಅಂದ್ರೆ ಇಲ್ಲ, ಇದೆಲ್ಲಾ ಸಿನಿಮಾ ಪ್ರಮೋಷನ್​ ಗಿಮಿಕ್ಕು ಸ್ವಾಮಿ!
ಹೌದು, ಸಿನಿಮಾದಲ್ಲಿ ನಟಿಸಿರುವ ಮಕ್ಕಳನ್ನು ಬಳಸಿಕೊಂಡು ಈ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ರವಿ ಬಸ್ರೂರು ಬಾಯಿಗೆ ಬಟ್ಟೆ ಕಟ್ಟಿ ಕಿಡ್ನಾಪ್​​ ಮಾಡುವ ರೀತಿ ಮಾಡಿ ಅವರನ್ನು ಸ್ಡುಡಿಯೋದಲ್ಲಿ ಇಡಲಾಗುತ್ತದೆ. ನಂತ್ರ ಮಕ್ಕಳು ಸಿನಿಮಾದಲ್ಲಿ ನಮಗೆ ಅದೇ ಪಾತ್ರ ಯಾಕೆ ಕೊಟ್ರಿ? ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​​, ಪುನೀತ್​ ವಾಯ್ಸ್​​ ನೀಡಿರೋ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅಂತ ರೌಡಿಗಳ ರೀತಿ ಮಕ್ಕಳು ಕೇಳುತ್ತಾರೆ. ಇದಕ್ಕೆಲ್ಲಾ ಸಂಗೀತ ನಿರ್ದೇಶಕರು ಸಮಾಧಾನವಾಗಿಯೇ ಉತ್ತರ ನೀಡುತ್ತಾರೆ. ನಂತ್ರ ಗಿರ್ಮಿಟ್​ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಿರುವ ಹುಡುಗ ಬಂದು ಸಿನಿಮಾ ಪ್ರಮೋಷನ್​ ಮಾಡುವುದನ್ನು ಬಿಟ್ಟು ಇವರನ್ಯಾಕೆ ಕಿಡ್ನಾಪ್‌ ಮಾಡಿದ್ದೀರಿ ಎಂಬ ಸಂಭಾಷಣೆಗಳು ಇಲ್ಲಿವೆ.

ಕೊನೆಯದಾಗಿ ರವಿ ಬಸ್ರೂರು ಇದನ್ನು ಮಾಡಿದ್ದು ತಮಾಷೆಗಾಗಿ ಅಂತ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಸಣ್ಣ ಸ್ಕ್ರಿಪ್ಟ್​​​ನಲ್ಲೇ ಮಕ್ಕಳು ಈ ರೀತಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಇದಕ್ಕಿಂತ ಅದ್ಭುತವಾಗಿ ನಟಿಸಿದ್ದಾರೆ ಎಂದು ಹೇಳುತ್ತಾ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

Intro:Body:

khali girish

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.