ETV Bharat / sitara

ಸಲಾರ್​​ ಸಿನಿಮಾದ ಬಿಗ್​​ ಅಪ್​ಡೇಟ್..​ ರವಿ ಬಸ್ರೂರು ಅವರಿಗೆ ಪ್ರಶಾಂತ್​ ನೀಲ್‌ರಿಂದ​​ ಭರ್ಜರಿ ಗಿಫ್ಟ್‌! - ಕೆಜಿಎಫ್​ ಸಂಗೀತ ನಿರ್ದೇಶಕ

ಸಲಾರ್​ ಚಿತ್ರದ ಬಗ್ಗೆ ಮಾಹಿತಿ ನೀಡಿರುವ ಪ್ರಶಾಂತ್​ ನೀಲ್​​​, ಈ ಚಿತ್ರಕ್ಕೆ ರವಿ ಬಸ್ರೂರ್​ ಸಂಗೀತ ನಿರ್ದೇಶನ ಮಾಡುತ್ತಾರೆ ಎಂದು ಘೋಷಿಸಿದ್ದಾರೆ..

ಸಲಾರ್​​ ಸಿನಿಮಾದ ಬಿಗ್​​ ಅಪ್​ಡೇಟ್​​ ಕೊಟ್ಟ ಪ್ರಶಾಂತ್​ನೀಲ್​​

author img

By

Published : Jan 1, 2021, 3:30 PM IST

ಚಿತ್ರರಂಗದಿಂದ ಹೊಸ ವರ್ಷಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಹೊಸ ಹೊಸ ಸುದ್ದಿ ಕೂಡ ನಿರ್ದೇಶಕರು, ನಿರ್ಮಾಪಕರಿಂದ ಬರುತ್ತಿವೆ. ಆದ್ರೆ, ಕೆಜಿಎಫ್​​ ನಿರ್ದೇಶಕ ಪ್ರಶಾಂತ್​ ನೀಲ್​​ ಯಾವ ಸುದ್ದಿಯನ್ನು ಕೊಡ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕೆಜಿಎಫ್​​ನಿಂದ ಯಾವುದೇ ಹೊಸ ಅಪ್​ಡೇಟ್​​ ಸಿಕ್ಕದಿದ್ದರೂ, ಸಲಾರ್​​ ಚಿತ್ರದ ಬಿಗ್​​ ಅಪ್​​ಡೇಟ್​​ ನೀಡಿದ್ದಾರೆ ಪ್ರಶಾಂತ್​​ ನೀಲ್​.

ಇಂದು ರವಿ ಬಸ್ರೂರು ಹುಟ್ಟು ಹಬ್ಬ. ಅದರ ಪ್ರಯುಕ್ತ ಹೊಸ ಸುದ್ದಿ ಘೋಷಣೆ ಮಾಡಿದ್ದಾರೆ. ಬಸ್ರೂರಿನಲ್ಲಿ ನಿರ್ಮಾಣವಾಗಿರುವ ರವಿ ಬಸ್ರೂರ್​ ಸ್ಟುಡಿಯೋವನ್ನು ಉದ್ಘಾಟಿಸಿರುವ ಪ್ರಶಾಂತ್​ ನೀಲ್‌, ಅದರ ಜೊತೆ ಸಲಾರ್​​ ಚಿತ್ರದ ಹೊಸ ಮಾಹಿತಿಯನ್ನು ಕೊಟ್ಟಿದ್ದಾರೆ.

ಸಲಾರ್​ ಚಿತ್ರದ ಬಗ್ಗೆ ಮಾಹಿತಿ ನೀಡಿರುವ ಪ್ರಶಾಂತ್​ ನೀಲ್​​​, ಈ ಚಿತ್ರಕ್ಕೆ ರವಿ ಬಸ್ರೂರ್​ ಸಂಗೀತ ನಿರ್ದೇಶನ ಮಾಡುತ್ತಾರೆ ಎಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಉಗ್ರಂ ನಿರ್ದೇಶಕ ಪ್ರಶಾಂತ್ ನೀಲ್, ಹುಟ್ಟು ಹಬ್ಬದ ಶುಭಾಶಯಗಳು ರವಿ ಬಸ್ರೂರ್​​ ಜೀ... ಉಗ್ರಂ ಸಿನಿಮಾದಿಂದ ಕೆಜಿಎಫ್​​-1 ಕೆಜಿಎಫ್​​-2 ಸಿನಿಮಾದಲ್ಲಿ ನಮ್ಮ ಜೊತೆ ಇದ್ರಿ.. ಇವಾಗ ಸಲಾರ್​ ಸಿನಿಮಾ ಮೂಲಕ ನಮ್ಮ ಪಯಣ ಜೊತೆಯಾಗಿಯೇ ನಡೆಯುತ್ತದೆ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.