ಭಾರತೀಯ ಚಿತ್ರ ರಂಗದ ಬಹು ನಿರೀಕ್ಷಿತ, ಕುತೂಹಲಭರಿತ ಸಿನಿಮಾ ಕೆಜಿಎಫ್. ಸದ್ಯ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ದೊಡ್ಡ ದೊಡ್ಡ ನಟ-ನಟಿಯರು ಕಾಣಿಸಿಕೊಂಡಿದ್ದು, ಬಾಲಿವುಡ್ನ ಸಂಜಯ್ ದತ್, ರವೀನಾ ಟಂಡನ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಮತ್ತೊಂದು ಮಾಹಿತಿ ಹೊರ ಬಂದಿದ್ದು, ರವೀನಾ ಟಂಡನ್ ಚಿತ್ರ ತಂಡಕ್ಕೆ ಬೈ ಹೇಳಿ ಮುಂಬೈಗೆ ಹಾರಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿರುವ ಬಾಲಿವುಡ್ ಬೆಡಗಿ ಮುಂಬೈನತ್ತ ತೆರಳಿದ್ದಾರೆ.
- " class="align-text-top noRightClick twitterSection" data="
">
ರವೀನಾ ಟಂಡನ್ ಕೆಜಿಎಫ್ ಚಿತ್ರ ತಂಡದ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಿಫ್ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ನು ರವೀನಾ ಟಂಡನ್ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಪ್ರಧಾನಮಂತ್ರಿ ರಮಿಕಾ ಸೇನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಇವರನ್ನು ಚಿತ್ರ ತಂಡ ತುಂಬು ಹೃದಯದಿಂದ ಸ್ವಾಗತಿಸಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ರವೀನಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ರಾಕಿಯನ್ನು ಸೆರೆಹಿಡಿಯುವವರು ಬಂದಾಯ್ತು ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಯಶ್ ಕೂಡ ರವೀನಾ ಮತ್ತು ತಾವು ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನಮ್ಮ ತವರಿಗೆ ಸ್ವಾಗತ ಎಂದು ಬರೆದುಕೊಂಡಿದ್ದರು.
- " class="align-text-top noRightClick twitterSection" data="
">