ETV Bharat / sitara

ನಾನು ಇನ್ನೂ ಎತ್ತರಕ್ಕೆ ಏರಬೇಕು...ಮನದಾಸೆ ಹಂಚಿಕೊಂಡ ರಶ್ಮಿಕಾ - Rashmika in Pushpa movie

ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವಂತೆ ಬಾಲಿವುಡ್​ನಲ್ಲಿ ಕೂಡಾ ಹೆಸರು ಮಾಡಬೇಕು. ಹಾಲಿವುಡ್​​​ನಲ್ಲಿ ಕೂಡಾ ನಟಿಸಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ತಮ್ಮ ಮನದಾಸೆ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ತೆಲುಗಿನಲ್ಲಿ ಪುಷ್ಪಾ ಹಾಗೂ ಹಿಂದಿಯಲ್ಲಿ ಮಿಷನ್ ಮಜ್ನು ಚಿತ್ರದಲ್ಲಿ ನಟಿಸುತ್ತಿದ್ದಾರೆ.

Rashmika Mandanna
ರಶ್ಮಿಕಾ
author img

By

Published : Feb 4, 2021, 9:30 AM IST

ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರರಂಗದಿಂದ ಕರಿಯರ್ ಆರಂಭಿಸಿ ಈಗ ಬಾಲಿವುಡ್​​ವರೆಗೂ ದಾಪುಗಾಲಿಟ್ಟಿರುವ ಚೆಲುವೆ. ಕನ್ನಡದಿಂದ ತೆಲುಗು, ತಮಿಳು ಈಗ ಬಾಲಿವುಡ್​​​​​ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ರಶ್ಮಿಕಾ, ಅವಕಾಶ ದೊರೆತರೆ ಹಾಲಿವುಡ್​ ಚಿತ್ರಗಳಲ್ಲಿ ಕೂಡಾ ನಟಿಸುತ್ತೇನೆ ಎಂದು ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಥಿಯೇಟರ್​​ನಲ್ಲಿ ಹೌಸ್​ಫುಲ್​​ಗೆ ಅವಕಾಶ ಕೊಡಿ ಎಂದ ಶಿವಣ್ಣ

ತಮ್ಮ 4 ವರ್ಷಗಳ ಸಿನಿಪಯಣದ ಬಗ್ಗೆ ಇತ್ತೀಚೆಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, "ಶೂಟಿಂಗ್ ಸೆಟ್​​​ ಯಾವಾಗಲೂ ನನಗೆ ಸಂತೋವನ್ನು ಹಂಚುವ ಒಂದು ಪರೀಕ್ಷಾ ಕೇಂದ್ರದಂತೆ ಕಾಣುತ್ತದೆ. ನನಗೆ ನೀಡಲಾಗುವ ಡೈಲಾಗ್​​​​​​ ಕಲಿಯುವುದು, ಅದನ್ನು ನೆನಪಿನಲ್ಲಿಟ್ಟುಕೊಂಡು ಭಾವನೆಗೆ ತಕ್ಕಂತೆ ಡೈಲಾಗ್ ಹೇಳುವುದೆಲ್ಲವೂ ನಾನು ಪರೀಕ್ಷೆ ಬರೆದಂತೆ ಆಗುತ್ತದೆ. ಇದು ಸ್ವಲ್ಪ ಶ್ರಮ ಎನಿಸಿದರೂ ನನಗೆ ಬಹಳ ಥ್ರಿಲ್ ನೀಡುತ್ತದೆ. ಇದರೊಂದಿಗೆ ಆ್ಯಕ್ಟಿಂಗ್ ಚೆನ್ನಾಗಿದೆ, ಶಾಟ್ ಓಕೆ ಎಂದು ಸೆಟ್​​​​ನಲ್ಲಿದ್ದವರು ಚಪ್ಪಾಳೆ ತಟ್ಟಿದರೆ ನನಗೆ ಉಂಟಾಗುವ ಖುಷಿಯನ್ನು ಹೇಳಲು ಅಸಾಧ್ಯ. ಈ ನಾಲ್ಕು ವರ್ಷಗಳ ಸಿನಿಪಯಣದಲ್ಲಿ ಇಂತ ಅನುಭವ ಸಾಕಷ್ಟು ಖುಷಿ ನೀಡಿದೆ. ಜೀವನದಲ್ಲಿ ಇನ್ನೂ ಸಾಧನೆ ಮಾಡಬೇಕಿದೆ. ದಕ್ಷಿಣ ಚಿತ್ರರಂಗದಂತೆ ಬಾಲಿವುಡ್​​ನಲ್ಲಿ ಕೂಡಾ ಹೆಸರು ಮಾಡಬೇಕು. ಇನ್ನೂ ಎತ್ತರಕ್ಕೆ ಏರಬೇಕು. ಅವಕಾಶ ದೊರೆತರೆ ಹಾಲಿವುಡ್​​​ ಚಿತ್ರಗಳಲ್ಲಿ ಕೂಡಾ ನಟಿಸುತ್ತೇನೆ" ಎಂದು ಹೇಳಿದ್ದಾರೆ. ರಶ್ಮಿಕಾ ಸದ್ಯಕ್ಕೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ, ಬಾಲಿವುಡ್​​​ನಲ್ಲಿ ಸಿದ್ದಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.