ರಶ್ಮಿಕಾ ಮಂದಣ್ಣ, ಸ್ಯಾಂಡಲ್ವುಡ್ನಲ್ಲಿ ಕರಿಯರ್ ಆರಂಭಿಸಿ ಟಾಲಿವುಡ್ನಲ್ಲಿ ಹೆಸರು ಮಾಡಿದವರು. ಇದೀಗ ಅವರು ತಮಿಳು ಸಿನಿಮಾಗಳಲ್ಲಿ ಕೂಡಾ ಬ್ಯುಸಿ ಇದ್ದಾರೆ. ನಟ ಕಾರ್ತಿ ಜೊತೆ ರಶ್ಮಿಕಾ 'ಸುಲ್ತಾನ್' ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಸದ್ಯಕ್ಕೆ ರಶ್ಮಿಕಾ ಕೊರೊನಾ ಲಾಕ್ಡೌನ್ ಕಾರಣದಿಂದ ಕೊಡಗಿನ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ನೆಲೆಸಿದ್ದಾರೆ. ಅಪ್ಪನೊಂದಿಗೆ ಇರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಪ್ರೀತಿಯ ಅಪ್ಪನನ್ನು ಹೊಗಳಿದ್ದಾರೆ.
'ಡ್ಯಾಡ್.... ಅವರ ಬಗ್ಗೆ ನಾನೇನು ಹೇಳಲಿ, ನನ್ನ ಅಪ್ಪ ನನ್ನ ಬಗ್ಗೆ ನಾನು ಮಗು ಇರುವಾಗಿನಿಂದ ಅದೆಷ್ಟೋ ಕನಸು ಕಟ್ಟಿಕೊಂಡವರು. ನಾನಾಗ ಪುಟ್ಟ ಹುಡುಗಿ ಉದ್ದುದ್ದ ಕೂದಲು, ದೊಡ್ಡ ಕಣ್ಣುಗಳು, ಉದ್ದನೆಯ ಮೂಗು...ಅಪ್ಪನ ಹೊಟ್ಟೆ ಮೇಲೆ ನಾನು ಮಗುವಾಗಿ ಡ್ಯಾನ್ಸ್ ಮಾಡುತ್ತಿದ್ದೆ, ನಾನು ಮಗು ಆಗಿದ್ದಾಗ ಅಪ್ಪ ಯಾವಾಗಲೂ ಬ್ಯುಸ್ನೆಸ್ ಬ್ಯುಸಿ ಎಂದು ಹೊರಟು ಬಿಡುತ್ತಾ ಇದ್ದರು. ನಾನು ಹೆಚ್ಚಾಗಿ ಬೆಳೆದದ್ದು ಹಾಸ್ಟೆಲ್ನಲ್ಲಿ. ಪಿಜಿ ನಂತರ ಸಿನಿಮಾಗೆ ಬರಬೇಕು ಎಂದು ಮನಸ್ಸು ಮಾಡಿದೆ. ಇಂದು ನಾನು ಅಪ್ಪನ ಬ್ಯುಸ್ನೆಸ್ ಪಾರ್ಟ್ನರ್ ಕೂಡಾ.
- " class="align-text-top noRightClick twitterSection" data="
">
ಯಾವಾಗಲೂ ಅಪ್ಪ ನನ್ನ ಪಿಲ್ಲರ್ ಹಾಗೂ ನಾನು ಅವರ ಪಿಲ್ಲರ್ನಂತೆ ಇರುತ್ತೇವೆ. ನಾನು ಈ ಮಾತನ್ನು ಹೇಳಲು ಕೂಡಾ ಕಾರಣವಿದೆ. ಅಪ್ಪ ಹಾಗೂ ಮಕ್ಕಳ ನಡುವೆ ಬಾಂಧವ್ಯ ಕಡಿಮೆ ಎಂದು ಎಷ್ಟೋ ಜನರು ಅಂದುಕೊಂಡಿರುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಏನಿದೆ, ನಮ್ಮ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡರೆ ಸಾಕು, ಅದೇ ದೊಡ್ಡ ವಿಚಾರ.
ಅಪ್ಪಂದಿರು ಯಾವಾಗಲೂ ಸ್ಟ್ರಿಕ್ಟ್ ಇರುತ್ತಾರೆ. ಏಕೆಂದರೆ ಅವರು ನಮ್ಮಿಂದ ಒಳ್ಳೆಯದನ್ನು ನಿರೀಕ್ಷಿಸುತ್ತಾರೆ. ಅಪ್ಪಂದಿರು ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ. ತಾಯಂದಿರಷ್ಟೇ ಅಪ್ಪಂದಿರು ಮಕ್ಕಳನ್ನು ಪ್ರೀತಿಸುತ್ತಾರೆಯೇ ಎಂದು ನೀವು ಕೇಳಬಹುದು. ಇದಕ್ಕೆ ನನ್ನ ಉತ್ತರ ಹೌದು.

ಅಮ್ಮನಷ್ಟೇ ಅಪ್ಪ ನನ್ನನ್ನು ಸಮಾನವಾಗಿ ಪ್ರೀತಿಸುತ್ತಾರೆ. ಬಹಳ ದಿನಗಳ ನಂತರ ಅಪ್ಪ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದು ಅರ್ಥ ಆಯ್ತು. ಅಪ್ಪ ಅಥವಾ ಅಮ್ಮ, ಇಬ್ಬರಲ್ಲಿ ನಾನು ಯಾರನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ನಿಮಗೆ ಅನ್ನಿಸುತ್ತದೆ ನಿಮ್ಮ ಉತ್ತರವನ್ನು ಕಮೆಂಟ್ ಮಾಡಿ' ಎಂದು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.