ಕಿರಿಕ್ ಪಾರ್ಟಿ ಸಿನಿಮಾ ನಂತರ ಪರಭಾಷಾ ಚಿತ್ರಗಳಲ್ಲಿ ಸಖತ್ ಡಿಮ್ಯಾಂಡ್ ಹೊಂದಿರುವ ರಶ್ಮಿಕಾ ಮಂದಣ್ಣ ಸದ್ಯ ತಮಿಳು ಚಿತ್ರರಂಗಕ್ಕೆ ಕಾಲಿಡುವ ಸುದ್ದಿ ಕನ್ಫರ್ಮ್ ಆಗಿದೆ.
ಇದೀಗ ಕಿರಿಕ್ ಬೆಡಗಿ ಸಾನ್ವಿ ತಮಿಳಿನ ಖ್ಯಾತ ಕಾರ್ತಿ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.
Official: #GeethaGovindam sensation @iamRashmika to make her Tamil debut opp. to @Karthi_Offl in #Remo Dir @Bakkiyaraj_k 's new movie.. pic.twitter.com/H2lCr8IhLP
— Ramesh Bala (@rameshlaus) February 24, 2019 " class="align-text-top noRightClick twitterSection" data="
">Official: #GeethaGovindam sensation @iamRashmika to make her Tamil debut opp. to @Karthi_Offl in #Remo Dir @Bakkiyaraj_k 's new movie.. pic.twitter.com/H2lCr8IhLP
— Ramesh Bala (@rameshlaus) February 24, 2019Official: #GeethaGovindam sensation @iamRashmika to make her Tamil debut opp. to @Karthi_Offl in #Remo Dir @Bakkiyaraj_k 's new movie.. pic.twitter.com/H2lCr8IhLP
— Ramesh Bala (@rameshlaus) February 24, 2019
ಶಿವಕಾರ್ತಿಕೇಯನ್ ನಟನೆಯ ಸೂಪರ್ಹಿಟ್ ಸಿನಿಮಾ ರೆಮೋ ನಿರ್ದೇಶನ ಮಾಡಿದ್ದ ಬಕ್ಕಿಯರಾಜ್ ಕಣ್ಣನ್, ಕಾರ್ತಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಕಾರ್ತಿಯ ಹೊಸ ಸಿನಿಮಾ ದೇವ್ ಕೆಲ ವಾರಗಳ ಹಿಂದೆ ತೆರೆಗೆ ಬಂದಿದ್ದು, ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರದರ್ಶನ ತೋರಿದೆ. ಈ ಸೋಲಿನ ಬಳಿಕ ಕಾರ್ತಿ ದೊಡ್ಡ ಬ್ರೇಕ್ನ ನಿರೀಕ್ಷೆಯಲ್ಲಿದ್ದು, ಮುಂಬರುವ ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದು ಟೈಟಲ್ ಇನ್ನೂ ಅಂತಿಮವಾಗಿಲ್ಲ.