ETV Bharat / sitara

ಇಂಡಿಯನ್​​​​​​​​​​​ ಖ್ಯಾತಿಯ ಎಸ್​​​. ಶಂಕರ್ ನಿರ್ದೇಶನದಲ್ಲಿ ರಶ್ಮಿಕಾ...?

author img

By

Published : Feb 18, 2021, 6:41 AM IST

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಎಸ್​​​. ಶಂಕರ್ ನಿರ್ದೇಶನದ ಸಿನಿಮಾವೊಂದರಲ್ಲಿ ರಶ್ಮಿಕಾ, ರಾಮ್​​ಚರಣ್ ತೇಜಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Indian fame director
ಶಂಕರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ

ಜೆಂಟಲ್​​​​ಮ್ಯಾನ್, ಭಾರತೀಯುಡು, ಅಪರಿಚಿತುಡು, ಎಂದಿರನ್​​​ನಂಥ ಸಿನಿಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ ಖ್ಯಾತ ನಿರ್ದೇಶಕ ಎಸ್​. ಶಂಕರ್​​, ಇದೀಗ ರಾಮ್​​​ಚರಣ್​ ಜೊತೆ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್​ ಚರಣ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದರ್ಶನ್ ಶೂಟಿಂಗ್​​​ಗೆ ಹೋಗೋದು ಯಾವಾಗ...ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು

ಎಸ್​​. ಶಂಕರ್​​​​​​​ ಅವರಿಗೆ ಇದು 15ನೇ ಸಿನಿಮಾವಾಗಿದ್ದು ರಾಮ್​​ಚರಣ್ ತೇಜಗೆ ಕೂಡಾ ಇದು 15 ನೇ ಸಿನಿಮಾ ಎಂಬುದು ವಿಶೇಷ. ಪೊಲಿಟಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್​​ಗೆ ಇದು 50ನೇ ಸಿನಿಮಾ. ಇನ್ನೂ ಹೆಸರಿಡದ ಈ ಚಿತ್ರವನ್ನು 3 ಡಿ ಮಾದರಿಯಲ್ಲಿ ನಿರ್ದೇಶಿಸಲು ಶಂಕರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಚಿತ್ರದ ಹಾಡುಗಳಿಗೆ ಅನಿರುದ್ಧ್​ ರವಿಚಂದರ್ ಸಂಗೀತ ನಿರ್ದೇಶಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದಲ್ಲಿ ಮಿಂಚಿ ಈಗ ಬಾಲಿವುಡ್​​ಗೂ ಕಾಲಿಟ್ಟಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಹಾಗೂ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅಮಿತಾಬ್​ ಬಚ್ಚನ್ ಪುತ್ರಿಯಾಗಿ ನಟಿಸುತ್ತಿದ್ದಾರೆ. ಎರಡೂ ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ ಶಂಕರ್ ಸಿನಿಮಾವಾದ್ದರಿಂದ ಈ ಚಿತ್ರದಲ್ಲಿ ಅವರು ನಟಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.