ETV Bharat / sitara

ಈ ನಟಿಯದು ಪ್ರಚಾರವಿಲ್ಲದ ಸೇವೆ: ಊಟ ಹಂಚಿದ ರಶ್ಮಿ ಪ್ರಭಾಕರ್ - Rashmi Prabhakar shared the meal

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಆಗಿ ಮನೆ ಮಾತಾಗಿದ್ದ ಚೆಂದುಳ್ಳಿ ಚೆಲುವೆ ರಶ್ಮಿ ಪ್ರಭಾಕರ್ ಲಾಕ್​​ ಡೌನ್​ ವೇಳೆ ಅಸಹಾಯಕರಿಗೆ ಊಟ ಹಂಚುವ ಕೆಲಸ ಮಾಡಿದ್ದಾರೆ.

Rashmi Prabhakar shared the meal
ರಶ್ಮಿ ಪ್ರಭಾಕರ್
author img

By

Published : May 3, 2020, 3:56 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಆಗಿ ಮನೆ ಮಾತಾಗಿದ್ದ ಚೆಂದುಳ್ಳಿ ಚೆಲುವೆ ರಶ್ಮಿ ಪ್ರಭಾಕರ್ ಅಭಿನಯಕ್ಕೆ ಮನ ಸೋಲದವರಿಲ್ಲ. ಮುಗ್ಧ ಅಭಿನಯದ ಮೂಲಕ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದ ರಶ್ಮಿ ಪ್ರಭಾಕರ್ ಇದೀಗ ಲಾಕ್ ಡೌನ್ ಸಮಯದಲ್ಲಿ ಸುದ್ದಿಯಲ್ಲಿದ್ದಾರೆ.

Rashmi Prabhakar shared the meal
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ರಶ್ಮಿ ಪ್ರಭಾಕರ್

ಲಾಕ್ ಡೌನ್ ಸಮಯದಲ್ಲಿ ಹೆಣ್ಣು ಮಗಳಾಗಿ ರಶ್ಮಿ ಪ್ರಭಾಕರ್ ಮಾಡಿರುವಂತಹ ಕೆಲಸ ಶ್ಲಾಫನೀಯವಾದುದು ಮಾತ್ರವಲ್ಲದೇ ಎಲ್ಲರೂ ಕೊಂಡಾಡುವಂತಾಗಿದೆ. ‘ ಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ಮನೆಯಲ್ಲಿ ಇರುವುದು ಅನಿವಾರ್ಯವಾಗಿದೆ. ಇಂತಹ ಸಮಯದಲ್ಲಿ ಅಸಹಾಯಕರಿಗೆ ಸಹಾಯ ಹಸ್ತ ನೀಡಲು ರಶ್ಮಿ ಪ್ರಭಾಕರ್ ಮುಂದಾಗಿದ್ದರು. ಸಾಮಾನ್ಯ ಜನರ ಕಷ್ಟ ಅರಿತ ರಶ್ಮಿ ಮೊದಲು ಊಟ ಹಂಚುವ ಕೆಲಸ ಮಾಡಿದರು. ಮುಂದೆ ಬಟ್ಟೆಯ ಜೊತೆಗೆ ದಿನಸಿ ಕಿಟ್ ಅನ್ನು ಹಂಚುವ ಮೂಲಕ ಸಹಾಯ ಮಾಡಿದ್ದಾರೆ.

Rashmi Prabhakar shared the meal
ರಶ್ಮಿ ಪ್ರಭಾಕರ್

ಲಾಕ್ ಡೌನ ಆದ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡಿರುವ ರಶ್ಮಿ ಎಲ್ಲಿಯೂ ಪ್ರಚಾರ ಬಯಸಲಿಲ್ಲ. ಮನಃಪೂರ್ವಕವಾಗಿ ಕಷ್ಟದಲ್ಲಿರುವ ಜನರಿಗೆ ಕೈಲಾದ ಸಹಾಯ ಮಾಡಿರುವ ಇವರು ಎಲ್ಲಿಯೂ ತಾವು ಮಾಡಿರುವಂತಹ ಕೆಲಸದ ಫೋಟೋವನ್ನು ತೆಗೆಯಲಿಲ್ಲ. ಎಲ್ಲದಕ್ಕಿಂತಲೂ ಮುಖ್ಯವಾಗಿ ರಶ್ಮಿ ಅವರು ಈ ಮಹಾತ್ಕಾರ್ಯಕ್ಕಾಗಿ ಎಲ್ಲಿಯೂ ಫಂಡ್ ರೈಸ್ ಮಾಡಲಿಲ್ಲ. ಬದಲಿಗೆ ತಮ್ಮ ಸ್ವಂತ ಹಣದಿಂದ, ಸ್ನೇಹಿತರು ಕುಟುಂಬದವರು ನೀಡಿದ ಸಹಾಯದಿಂದ ಊಟ, ಬಟ್ಟೆಯ ಜೊತೆಗೆ ದಿನಸಿ ಕಿಟ್ ಹಂಚಿದ್ದಾರೆ. ಆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.