ETV Bharat / sitara

ರಿಲೀಸ್​ಗೂ ಮುನ್ನವೇ ಸಂಕಷ್ಟ.. '83' ಸಿನಿಮಾ ವಿರುದ್ಧ ವಂಚನೆ ಪ್ರಕರಣ ದಾಖಲು

author img

By

Published : Dec 10, 2021, 9:17 PM IST

ಟ್ರೈಲರ್​ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿರುವ 83 ಚಿತ್ರ ಇದೀಗ ಸಂಕಷ್ಟಕ್ಕೊಳಗಾಗಿದ್ದು, ಚಿತ್ರತಂಡದ ವಿರುದ್ಧ ಕೋರ್ಟ್​​ನಲ್ಲಿ ದೂರು ದಾಖಲಾಗಿದೆ.

83cinema in fraud case
83cinema in fraud case

ಮುಂಬೈ: ಮಾಜಿ ಕ್ರಿಕೆಟರ್​ ಕಪಿಲ್​ ದೇವ್​​ ಅವರ ಜೀವನ ಆಧಾರಿತ ಹಾಗೂ ಟೀಂ ಇಂಡಿಯಾ 1983ರಲ್ಲಿ ವಿಶ್ವಕಪ್​​​ ಗೆದ್ದಿರುವ ವಿಷಯವನ್ನಿಟ್ಟುಕೊಂಡು ನಿರ್ಮಾಣಗೊಂಡಿರುವ '83' ಚಿತ್ರ ಬರುವ ಡಿಸೆಂಬರ್​​​ 24ರಂದು ರಿಲೀಸ್​​​ ಆಗಲಿದೆ. ಆದರೆ, ಚಿತ್ರ ಬಿಡುಗಡೆಗೆ ಮುನ್ನವೇ ಇದೀಗ ಸಂಕಷ್ಟಕ್ಕೊಳಗಾಗಿದೆ.

ಬಾಲಿವುಡ್​​ ದಂಪತಿಗಳಾಗಿರುವ ದೀಪಿಕಾ ಪಡುಕೋಣೆ - ರಣವೀರ್​ ಸಿಂಗ್​​ ಜೊತೆಯಾಗಿ ನಟನೆ ಮಾಡಿರುವ ಚಿತ್ರ 83 ವಿರುದ್ಧ ಇದೀಗ ಹಣಕಾಸು ಸಂಸ್ಥೆಯೊಂದು ವಂಚನೆ ಪ್ರಕರಣ ದಾಖಲು ಮಾಡಿದೆ. ಯುಎಇ ಮೂಲದ ಹೂಡಿಕೆದಾರ ಕಂಪನಿ ವಿಬ್ರಿ ಮೀಡಿಯಾ ಮುಂಬೈನ ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದಾರೆ.

ಸಿನಿಮಾ ನಿರ್ಮಾಪಕಿ ದೀಪಿಕಾ ಪಡುಕೋಣೆ, ಸಾಜಿದ್ ನಾಡಿಯಾವಾಲಾ, ನಟ ರಣವೀರ್​ ಸಿಂಗ್​ ಸೇರಿದಂತೆ ಅನೇಕರ ವಿರುದ್ಧ ವಂಚನೆ ಪ್ರಕರಣ ದಾಖಲು ಮಾಡಿದೆ. ಸಿನಿಮಾಗೆ ಈ ಕಂಪನಿ 16 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದು, ಇದೀಗ ತಮಗೆ ವಂಚನೆ ಮಾಡಲು ಚಿತ್ರತಂಡ ಮುಂದಾಗಿದೆ ಎಂದು ದೂರು ದಾಖಲು ಮಾಡಿದೆ.

ಇದನ್ನೂ ಓದಿರಿ: ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ

ಡಿಸೆಂಬರ್​​ 24ರಂದು ಈ ಸಿನಿಮಾ ರಿಲೀಸ್​ ಆಗಬೇಕಾಗಿದ್ದು, ಇದೀಗ ದೂರು ದಾಖಲಾಗಿರುವ ಕಾರಣ ಚಿತ್ರತಂಡ ಸಂಕಷ್ಟಕ್ಕೊಳಗಾಗಿದೆ. ಈಗಾಗಲೇ ಸಿನಿಮಾ ಟ್ರೈಲರ್​​ ರಿಲೀಸ್​​ ಆಗಿದ್ದು, ಕ್ರಿಕೆಟ್​​ ಪ್ರೇಮಿಗಳು ಹಾಗೂ ಸಿನಿಮಾ ರಸಿಕರ ಮನ ಗೆದ್ದಿದೆ. ಈ ಚಿತ್ರ ಹಿಂದಿ, ತಮಿಳು,ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.