ರಂಗನಾಯಕ, ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ. ನವರಸನಾಯಕ ಜಗ್ಗೇಶ್ ಅಭಿನಯದ ಹಾಗೂ ಗುರು ಪ್ರಸಾದ್ ನಿರ್ದೇಶನದ ಚಿತ್ರ ರಂಗನಾಯಕ.
ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ಮಾಡಿ, 11 ವರ್ಷದ ಬಳಿಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೊತೆಯಾಗಿ ಮಾಡುತ್ತಿರುವ ಸಿನಿಮಾ ರಂಗನಾಯಕ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ರಂಗನಾಯಕ ಸಿನಿಮಾ ಈ ವರ್ಷ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನ ನರೇಂದ್ರ ಮೋದಿ ಬಗ್ಗೆ ವಿವಾದ ಸೃಷ್ಟಿಸುವ ಅಂಶಗಳಿರುವ ಅಂಶಗಳು ಇದ್ದಿದ್ದರಿಂದ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಬಳಿಕ ಚಿತ್ರ ಸ್ಟಾಪ್ ಮಾಡಿತ್ತು. ಈಗ ವರ್ಷದ ಕೊನೆಯಲ್ಲಿ ರಂಗನಾಯಕ ಚಿತ್ರ ಇಂದು ಅಧಿಕೃತವಾಗಿ ಸೆಟ್ಟೇರಿದೆ. ಬಸವನಗುಡಿಯ ರಾಯರ ಮಠದಲ್ಲಿ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಕೂಡ ಪ್ರಾರಂಭವಾಗಿದೆ ಎಂದು ನಟ ಜಗ್ಗೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
-
ಭ್ರಾಹ್ಮೀ ಮುಹೂರ್ತದ ಶುಭಸಮಯ #ರಂಗನಾಯಕ ಚಿತ್ರ ಬಸವನಗುಡಿ #ರಾಯರಮಠದಲ್ಲಿ ಪ್ರಥಮ ಆರಂಭಪಲಕ ಹಾಗು ರಾಯರ ಬೃಂದಾವನದ ಚಿತ್ರಿಕರಣ ಮಾಡಿ ಕಾರ್ಯ ಆರಂಭವಾಯಿತು!#ಮಠ #ಎದ್ದೇಳುಮಂಜುನಾಥ ನಂತರ #ಗುರುಪ್ರಸಾಧ್ ನನ್ನ ಸಮ್ಮಿಲನ...ನಗಿಸಲು ನಾವು ರೆಡಿ
— ನವರಸನಾಯಕ ಜಗ್ಗೇಶ್ (@Jaggesh2) December 28, 2020 " class="align-text-top noRightClick twitterSection" data="
ಶುಭಹಾರೈಸಿ:)
ಶುಭದಿನ ಶುಭೋದಯ:) pic.twitter.com/BbmH03cuaP
">ಭ್ರಾಹ್ಮೀ ಮುಹೂರ್ತದ ಶುಭಸಮಯ #ರಂಗನಾಯಕ ಚಿತ್ರ ಬಸವನಗುಡಿ #ರಾಯರಮಠದಲ್ಲಿ ಪ್ರಥಮ ಆರಂಭಪಲಕ ಹಾಗು ರಾಯರ ಬೃಂದಾವನದ ಚಿತ್ರಿಕರಣ ಮಾಡಿ ಕಾರ್ಯ ಆರಂಭವಾಯಿತು!#ಮಠ #ಎದ್ದೇಳುಮಂಜುನಾಥ ನಂತರ #ಗುರುಪ್ರಸಾಧ್ ನನ್ನ ಸಮ್ಮಿಲನ...ನಗಿಸಲು ನಾವು ರೆಡಿ
— ನವರಸನಾಯಕ ಜಗ್ಗೇಶ್ (@Jaggesh2) December 28, 2020
ಶುಭಹಾರೈಸಿ:)
ಶುಭದಿನ ಶುಭೋದಯ:) pic.twitter.com/BbmH03cuaPಭ್ರಾಹ್ಮೀ ಮುಹೂರ್ತದ ಶುಭಸಮಯ #ರಂಗನಾಯಕ ಚಿತ್ರ ಬಸವನಗುಡಿ #ರಾಯರಮಠದಲ್ಲಿ ಪ್ರಥಮ ಆರಂಭಪಲಕ ಹಾಗು ರಾಯರ ಬೃಂದಾವನದ ಚಿತ್ರಿಕರಣ ಮಾಡಿ ಕಾರ್ಯ ಆರಂಭವಾಯಿತು!#ಮಠ #ಎದ್ದೇಳುಮಂಜುನಾಥ ನಂತರ #ಗುರುಪ್ರಸಾಧ್ ನನ್ನ ಸಮ್ಮಿಲನ...ನಗಿಸಲು ನಾವು ರೆಡಿ
— ನವರಸನಾಯಕ ಜಗ್ಗೇಶ್ (@Jaggesh2) December 28, 2020
ಶುಭಹಾರೈಸಿ:)
ಶುಭದಿನ ಶುಭೋದಯ:) pic.twitter.com/BbmH03cuaP
ಬ್ರಾಹ್ಮಿ ಮುಹೂರ್ತದ ಶುಭ ಸಮಯದಲ್ಲಿ ರಂಗನಾಯಕ ಚಿತ್ರ ಬಸವನಗುಡಿ ರಾಯರ ಮಠದಲ್ಲಿ ಪ್ರಥಮ ಆರಂಭ ಫಲಕ ಹಾಗೂ ರಾಯರ ಬೃಂದಾವನದ ಚಿತ್ರೀಕರಣ ಮಾಡಿ ಕಾರ್ಯ ಆರಂಭವಾಯಿತು. ಮಠ, ಎದ್ದೇಳು ಮಂಜುನಾಥ ನಂತರ ಗುರುಪ್ರಸಾದ್ ನನ್ನ ಸಮ್ಮಿಲನ, ನಗಿಸಲು ನಾವು ರೆಡಿ ಶುಭಹಾರೈಸಿ ಎಂದು ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯದ ಜೊತೆಗೆ ನಿರ್ದೇಶನ ಮಾಡ್ತಿರುವ ಗುರು ಪ್ರಸಾದ್, ಈಗ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಬಹುಶಃ ಮುಂದಿನ ವರ್ಷ ಜಗ್ಗೇಶ್ ಅವರನ್ನು ತೆರೆ ಮೇಲೆ ರಂಗನಾಯಕನಾಗಿ ನೋಡಬಹುದು.