ಕೆಲವೊಂದು ಸಿನಿಮಾಗಳು ಶೂಟಿಂಗ್ ಆರಂಭಕ್ಕೂ ಮುನ್ನ, ಮತ್ತೆ ಕೆಲವು ಸಿನಿಮಾಗಳು ತೆರೆ ಕಂಡಾಗ ಯಾವುದಾದರೂ ಒಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಎಷ್ಟೋ ಉದಾಹರಣೆಗಳು ಸ್ಯಾಂಡಲ್ವುಡ್ನಲ್ಲಿ ನಡೆದಿವೆ.
ಇದೀಗ ಇಂತಹದ್ದೇ ಪರಿಸ್ಥಿತಿ 'ರಣಭೂಮಿ' ಸಿನಿಮಾ ತಂಡಕ್ಕೆ ಎದುರಾಗಿದೆ. 'ಜೋಕಾಲಿ' ಸಿನಿಮಾವನ್ನು ನಿರ್ದೇಶಿಸಿದ್ದ ಚಿರಂಜೀವಿ ದೀಪಕ್ ಅವರು ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ನಿರಂಜನ್ ಒಡೆಯರ್ ಭಜರಂಗಿ ಲೋಕಿ ಹಾಗೂ ಇನ್ನಿತರರನ್ನು ಹಾಕಿಕೊಂಡು ಈ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಚಿರಂಜೀವಿ ಸಿನಿಮಾ ಚಿತ್ರೀಕರಣದ ದಿನಾಂಕವನ್ನು ಕೂಡಾ ಅನೌನ್ಸ್ ಮಾಡಿದ್ದಾರೆ. ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಸಾಹಸಮಯ ಸಿನಿಮಾ 'ರಣಭೂಮಿ' ನವೆಂಬರ್ 8 ರಂದು ಬಿಡುಗಡೆಯಾಗಲಿದೆ. ಮಾನಸಿ ಫಿಲ್ಮ್ ಬ್ಯಾನರ್ ಅಡಿ ಚಿರಂಜೀವಿ ದೀಪಕ್ ಅವರೇ ನಿರ್ಮಾಣ ಮಾಡಿದ್ದಾರೆ.
![Ranbhoomi movie release on november 8th, ನವೆಂಬರ್ 8 ರಂದು ರಣಭೂಮಿ ಚಿತ್ರ ಬಿಡುಗಡೆ](https://etvbharatimages.akamaized.net/etvbharat/prod-images/kn-bng-02-heroheroinbhaggeranabhoomidirectorasmadhan-video-7204835_04112019163149_0411f_1572865309_266.jpg)
ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಚಿರಂಜೀವಿ ದೀಪಕ್, ಖಳನಟ ಡ್ಯಾನಿ ಕುಟ್ಟಪ್ಪ, ಛಾಯಾಗ್ರಾಹಕ ನಾಗಾರ್ಜುನ್, ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಸೇರಿ ಕೆಲವೇ ಕೆಲವು ಮಂದಿ ಇದ್ದರು. ಪ್ರೆಸ್ಮೀಟ್ಗೆ ನಾಯಕ, ನಾಯಕಿ ಬರದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ, 'ನನಗೆ ಸಿನಿಮಾ ಹೀರೋ, ಹೀರೋಯಿನ್ ಮುಖ್ಯ ಅಲ್ಲ. ಕಥೆ ಚೆನ್ನಾಗಿದ್ದರೆ ಜನರು ಥಿಯೇಟರ್ಗೆ ಬಂದು ಸಿನಿಮಾ ನೋಡ್ತಾರೆ, ಇಲ್ಲಿ ನಾಯಕ, ನಾಯಕಿಯಿಂದ ಸಿನಿಮಾ ಹಿಟ್ ಆಗುವುದಿಲ್ಲ ಎನ್ನುವ ಮೂಲಕ ನಾಯಕ, ನಾಯಕಿ ಬಗ್ಗೆ ಅಸಮಾಧಾನ ಹೊರ ಹಾಕಿದರು.