ಬಿಟೌನ್ನಲ್ಲಿ ಗುಸುಗುಸು ಪಿಸುಪಿಸು ಮಾತುಗಳಿಗೆ ಬರವೇ ಇಲ್ಲ ಬಿಡಿ. ಇವರು ಅವರ ಜೊತೆ ಡೇಟಿಂಗ್ ಮಾಡಿದ್ರು. ಆ ಹಿರೋಯಿನ್ ಈ ನಟನ ಜೊತೆ ಸುತ್ತಾಡುತ್ತಿದ್ರು ಅಂತ ಆಗಿಂದ್ದಾಗ್ಗೆ ಸುದ್ದಿಯಾಗ್ತಾನೆ ಇರುತ್ತೆ. ಇದೀಗ ಹೊಸದೊಂದು ಗಾಸಿಪ್ ಹರಿದಾಡುತ್ತಿದೆ. ಅದುವೇ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಆಮಂತ್ರಣ ಪತ್ರಿಕೆ ವಿಚಾರ.
ಅರೆರೆ..! ಇದೇನಪ್ಪ ಇವ್ರು ಒಂದ್ ಮಾತ್ ಯಾರಿಗೂ ಹೇಳ್ದೆ ಮದ್ವೆ ಆಗ್ತಿದ್ದಾರೆ ಅಂದ್ರಾ? ಇದು ನಿಜವಾದ ಮದುವೆ ಇನ್ವಿಟೇಷನ್ ಅಲ್ಲ ಕಣ್ರೀ..ಪಕ್ಕಾ ಫೇಕ್.
ಹೌದು, ಥೇಟ್ ಮದುವೆ ಕರೆಯೋಲೆ ರೀತಿಯಲ್ಲೇ ಒಂದು ಆಹ್ವಾನ ಪತ್ರಿಕೆ ಮುದ್ರಿಸಿ ಅದರಲ್ಲಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಎಂದು ಬರೆಯಲಾಗಿದೆ. ಮದುವೆ ದಿನಾಂಕವನ್ನು ಜನವರಿ 22, 2020, ಸ್ಥಳ: ರಾಜಸ್ಥಾನ, ಸಮಯ ಸಂಜೆ 5ಗಂಟೆ ಎಂದು ನಮೂದಿಸಲಾಗಿದೆ.
- " class="align-text-top noRightClick twitterSection" data="
">
ಆದ್ರೆ, ಇದು ಫೇಕ್ ಅನ್ನೋದನ್ನು ಕಂಡುಹಿಡಿಯಲಾಗಿದೆ. ಆಲಿಯಾ ಭಟ್ ತಂದೆಯ ಹೆಸರು ಮಹೇಶ್ ಭಟ್. ಆದ್ರೆ ಈ ನಕಲಿ ಆಮಂತ್ರಣ ಪತ್ರದಲ್ಲಿ ಮುಖೇಶ್ ಭಟ್ ಅಂತ ಮುದ್ರಿಸಲಾಗಿದೆ.
- " class="align-text-top noRightClick twitterSection" data="
">
ಇನ್ನೋಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಆಲಿಯಾ ಅವರನ್ನೇ ಪ್ರಶ್ನಿಸಿದ್ರೆ, "ನಾನ್ ಏನ್ ಹೇಳಲಿ?"ಅಂತ ನಗ್ತಾನೆ ಉತ್ರ ಕೊಟ್ರು.