ಬಾಲಿವುಡ್ನಲ್ಲಿ ಹೆಚ್ಚು ಸುದ್ದಿಯಲ್ಲಿರುವ ಜೋಡಿಗಳ ಪೈಕಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಕೂಡ ಇದೆ. ಇವರು ಆಗಾಗ ಏನಾದರೂ ತರ್ಲೆಗಳನ್ನು ಮಾಡುತ್ತ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.
ಇದೀಗ ರಣವೀರ್ ಸಿಂಗ್ ದೀಪಿಕಾ ಪಡುಕೋಣೆಯ ನೀಳ ಸೊಂಟವನ್ನು ನೋಡುತ್ತಿರುವ ಫೋಟೋ ಒಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಆಶ್ಚರ್ಯಕರ ಕಮೆಂಟ್ ಒಂದನ್ನು ಮಾಡಿದ್ದಾರೆ.
- " class="align-text-top noRightClick twitterSection" data="
">
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ರಾಮ್ ಲೀಲಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ಫ್ರೀ ಇದ್ದ ಸಮಯದಲ್ಲಿ ಈ ಇಬ್ಬರ ಫೋಟೋ ಒಂದನ್ನು ತೆಗೆಯಲಾಗಿದೆ. ಫೋಟೋದಲ್ಲಿ ರಣವೀರ್ ಸಿಂಗ್ ದೀಪಿಕಾ ಪಡುಕೋಣೆಯ ಸೊಂಟವನ್ನು ನೋಡುತ್ತಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಣವೀರ್ ಸಿಂಗ್ ನೋ ಕ್ಯಾಪ್ಶನ್ ನೀಡೆಡ್(ಈ ಚಿತ್ರಕ್ಕೆ ಅಡಿಬರಹ ಬೇಡ) ಎಂದು ಬರೆದಿದ್ದಾರೆ.
ಇದಕ್ಕೆ ಆಶ್ಚರ್ಯಕರವಾದ ಕಮೆಂಟ್ ಮಾಡಿರುವ ದೀಪಿಕಾ ಪಡುಕೋಣೆ "ಕಳೆದ 7 ವರ್ಷದಿಂದ ಯಾವುದೇ ಬದಲಾವಣೆ ಇಲ್ಲ. ನೀನು ನನ್ನ ನೋಡುತ್ತಿರುವೆ. ನಾನು ನಿನ್ನ ನೋಡುತ್ತಿದ್ದೇನೆ" ಎಂದು ಬರೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಕಮೆಂಟ್ಗಳ ಸುರಿಮಳೆಯಾಗತ್ತಿದೆ.