ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ ನಟಿ ಮೋಹಕ ತಾರೆ ರಮ್ಯಾ. ಸದ್ಯ ಸಿನಿಮಾ ಹಾಗೂ ರಾಜಕಾರಣದಿಂದ ದೂರ ಉಳಿದಿರುವ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.
ಇದೀಗ ಸತೀಶ್ ನೀನಾಸಂ ಮೊದಲ ಬಾರಿಗೆ ನಟಿಸುತ್ತಿರುವ ತಮಿಳು ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕನ್ನಡದ ನಮ್ಮ ಹೆಮ್ಮೆಯ ನಟ ಸತೀಶ್ ನೀನಾಸಂ ಅವರ "ಪಗೈವನುಕು ಅರುಳ್ಳಾಯ್" ಚಿತ್ರದ ಸತೀಶ್ ಪಾತ್ರದ ಪೋಸ್ಟರ್ ಇಂದು ಸಂಜೆ 5 ಗಂಟೆಗೆ ತುಂಬಾ ಉತ್ಸಾಹದಿಂದ ಲಾಂಚ್ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಸತೀಶ್ ನೀನಾಸಂ ಅವರು ತಮಿಳಿನಲ್ಲಿ ನಟಿಸುತ್ತಿದ್ದಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ. ಮೊದಲ ನೋಟಕ್ಕೆ ಸಂಜೆವರೆಗೆ ಕಾಯುತ್ತಿರಿ ಎಂದಿದ್ದರು.
ಅದರಂತೆ ಮೋಹಕ ತಾರೆ ರಮ್ಯಾ 5 ಗಂಟೆಗೆ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ಸತೀಶ್ ಲುಕ್ ಹೇಗಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿತ್ತು. ಇದಕ್ಕೆ, ನಟಿ ರಮ್ಯಾ ಉತ್ತರ ನೀಡಿದ್ದಾರೆ. ಅವರು ಪಗೈವನುಕು ಅರುಳ್ಳಾಯ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಹೊಸ ಪೋಸ್ಟರ್ನಲ್ಲಿ ಸತೀಶ್ ಲುಕ್ ಸಾಕಷ್ಟು ಗಮನ ಸೆಳೆಯುತ್ತಿದೆ. ಸತೀಶ್ ಕೈಯಲ್ಲಿ ಸಿಗಾರ್ ಇಟ್ಟುಕೊಂಡು ಸೇದುತ್ತಿದ್ದಾರೆ. ಸದ್ಯ ಈ ಪೋಸ್ಟರ್ ರಮ್ಯಾ ರಿಲೀಸ್ ಮಾಡಿರುವುದರಿಂದ ಚಿತ್ರಕ್ಕೆ ಒಳ್ಳೆಯ ಪ್ಲಸ್ ಪಾಯಿಂಟ್ ಆಗಲಿದೆ.
ಇನ್ನು, ಸತೀಶ್ ನೀನಾಸಂ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಈಗ ತಮಿಳಿನ ಪಗೈವನುಕು ಅರುಳ್ಳಾಯ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸತೀಶ್ ನೀನಾಸಂ ಮಾಸ್ ಲುಕ್‌ನಲ್ಲಿ ಕಾಣಿಸಿದ್ದಾರೆ.