ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರೋ ಸಿನಿಮಾ '100'. ಟ್ರೇಲರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಹವಾ ಸೃಷ್ಟಿಸಿರೋ 100 ಸಿನಿಮಾವನ್ನ ರಮೇಶ್ ಅರವಿಂದ್( Ramesh Aravind) ನಟಿಸಿ ನಿರ್ದೇಶನ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಸಿನಿಮಾ ಬಳಿಕ, ರಮೇಶ್ ಅರವಿಂದ್ ಮತ್ತೆ ಖಾಕಿ ತೊಟ್ಟು ತನಿಖೆ ಮಾಡೋದಕ್ಕೆ ಸಜ್ಜಾಗಿದ್ದಾರೆ.
![Ramesh Aravind starring 100 cinema to be released](https://etvbharatimages.akamaized.net/etvbharat/prod-images/kn-bng-04-100-movieyali-message-edie-ramesh-aravind-7204735_17112021160936_1711f_1637145576_189.jpg)
ಇದೇ ನವೆಂಬರ್ 19ರಂದು ಬಿಡುಗಡೆ ಆಗಲು ಸಜ್ಜಾಗಿರೋ ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡೋದಕ್ಕೆ ನಟ ಹಾಗು ನಿರ್ದೇಶಕ ರಮೇಶ್ ಅರವಿಂದ್, ನಿರ್ಮಾಪಕ ರಮೇಶ್ ರೆಡ್ಡಿ(producer Ramesh Reddy) ಹಾಗು ನಟಿ ಪೂರ್ಣ(Actress Poorna)ಉಪಸ್ಥಿತದ್ದರು. ಸೈಬರ್ ಕಥೆ ಆಧರಿಸಿರೋ 100 ಸಿನಿಮಾ ಕಥೆ, ಪ್ರತಿಯೊಬ್ಬರಿಗೆ ಲಿಂಕ್ ಆಗುವ ಕಥೆ. ಮೊಬೈಲ್ ಎಂಬ ಸೋಷಿಯಲ್ ಮೀಡಿಯಾ ಬಳಸುವಾಗ ಬಹಳ ಜಾಗೃತವಾಗಿರಬೇಕು ಎಂಬುದು ಕಥೆಯ ತಿರುಳು.
ತಮಿಳು ರೈಟರ್ ಸುಶಿ ಗಣೇಶ್ ಅವರ ಸಿನಿಮಾದ ಕಥೆಯ ರೈಟ್ಸ್ ಅನ್ನು ರಮೇಶ್ ಅರವಿಂದ್ ತೆಗೆದುಕೊಂಡು ಈ 100 ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದು, ತೆಲುಗು ನಟಿ ಪೂರ್ಣ ರಮೇಶ್ ಅರವಿಂದ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಪೂರ್ಣ, ಕನ್ನಡ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗೇ ರಚಿತಾ ರಾಮ್ ರಮೇಶ್ ಅರವಿಂದ್ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಡ್ಡೆ ಹುಲಿ, ಗಾಳಿಪಟ 2 ಸಿನಿಮಾಗಳನ್ನ ನಿರ್ಮಾಣ ಮಾಡಿರೋ ರಮೇಶ್ ರೆಡ್ಡಿ, ಈ ಚಿತ್ರವನ್ನ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಮೊಬೈಲ್ನಿಂದ(Mobile) ಮನೆಯಲ್ಲಿ ಏನೆಲ್ಲಾ ಸಮಸ್ಯೆಗಳು ಆಗುತ್ತವೆ ಅನ್ನೋದು 100 ಸಿನಿಮಾ ಒಳಗೊಂಡಿದೆ. ನಿರ್ಮಾಪಕ ರಮೇಶ್ ರೆಡ್ಡಿ ಹೇಳುವ ಹಾಗೆ ರಾಜ್ಯಾದ್ಯಂತ 100ರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಸತ್ಯ ಹೆಗಡೆ 100ಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಿರುವ 100 ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದೆ.