ಭಾರತೀಯ ಚಿತ್ರರಂಗದಲ್ಲಿ ಈಗ ಬಯೋಪಿಕ್ ಪರ್ವ ಪ್ರಾರಂಭವಾಗಿದೆ. ಸಿಲ್ವರ್ ಸ್ಕ್ರೀನ್ ಮೇಲೆ ಲಾಂಗು, ಮಚ್ಚುಗಳ ಸೌಂಡ್ ಕಡಿಮೆಯಾದಂತಿದೆ. ಮರ ಸುತ್ತಿ ಪ್ರೀತಿಸುವಂತ ಲವ್ ಸ್ಟೋರಿ ಸಿನಿಮಾಗಳ ಮೇಲಿನ ಒಲವು ಸಹ ಚಿತ್ರ ನಿರ್ಮಾಪಕರಲ್ಲಿ ಇಳಿಮುಖವಾದಂತಿದೆ.
ಹೌದು, ಈಗ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಕ್ರಿಕೆಟರ್, ರಾಜಕಾರಣ ಹಾಗೂ ಸಿನಿಮಾ ತಾರೆಯರ 'ವ್ಯಕ್ತಿ ಚಿತ್ರ' ಸಿನಿಮಾ ರೂಪದಲ್ಲಿ ಬರುತ್ತಿವೆ. ಇವುಗಳು ಪ್ರೇಕ್ಷಕ ವರ್ಗಗಳ ಆಕರ್ಷಿಸುತ್ತಿವೆ. ಈಗಾಗಲೇ ಎಂ.ಎಸ್ ಧೋನಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮೇರು ನಟ ಜೆಮಿನಿ ಗಣೇಶ್, ಟಾಲಿವುಡ್ ದಿಗ್ಗಜ ಹಾಗೂ ಮಾಜಿ ಸಿಎಂ ಎನ್ಟಿಆರ್ ಬಯೋಪಿಕ್ಗಳು ತೆರೆಕಂಡು, ಜಯ ಸಾಧಿಸಿವೆ. ಒಂದಿಷ್ಟು ಬಯೋಪಿಕ್ಗಳು ಬಿಡುಗಡೆ ಎದುರು ನೋಡುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ವ್ಯಕ್ತಿಚಿತ್ರ ಸೇರ್ಪಡೆಯಾಗಿದೆ.
-
It is a biopic of @KTRTRS ‘s father from the time he couldn’t bear the 3rd class treatment being given to Telangana people by the Andhras, and how he fought in a fiery way to achieve Telangana state. pic.twitter.com/VvUJV5LSXp
— Ram Gopal Varma (@RGVzoomin) April 18, 2019 " class="align-text-top noRightClick twitterSection" data="
">It is a biopic of @KTRTRS ‘s father from the time he couldn’t bear the 3rd class treatment being given to Telangana people by the Andhras, and how he fought in a fiery way to achieve Telangana state. pic.twitter.com/VvUJV5LSXp
— Ram Gopal Varma (@RGVzoomin) April 18, 2019It is a biopic of @KTRTRS ‘s father from the time he couldn’t bear the 3rd class treatment being given to Telangana people by the Andhras, and how he fought in a fiery way to achieve Telangana state. pic.twitter.com/VvUJV5LSXp
— Ram Gopal Varma (@RGVzoomin) April 18, 2019
ಕಾಂಟ್ರವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಕುರಿತಾದ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. 'ಟೈಗರ್ ಕೆಸಿಆರ್' ಟೈಟಲ್ನ ಈ ಚಿತ್ರಕ್ಕೆ 'ಅಗ್ರೆಸಿವ್ ಗಾಂಧಿ' ಎನ್ನುವ ಟ್ಯಾಗ್ಲೈನ್ ಫಿಕ್ಸ್ ಮಾಡಿದ್ದಾರೆ ವರ್ಮಾ. ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.
ಇನ್ನು ವರ್ಮಾ ಕೆಲ ದಿನಗಳ ಹಿಂದೆಯಷ್ಟೆ 'ಲಕ್ಷ್ಮಿ ಎನ್ಟಿಆರ್'ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಬಲಿಗರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಸಿಕ್ಕಾಪಟ್ಟೆ ಕಾಂಟ್ರವರ್ಸಿ ಮೈಮೇಲೆ ಎಳೆದುಕೊಂಡಿದ್ದ ಈ ಚಿತ್ರ ಮೇಲೆ ಬಂತು.
ಇನ್ನು ತೆಲಂಗಾಣ ಪ್ರತ್ಯೇಕ ರಾಜ್ಯದ ಸ್ಥಾಪನೆಯಲ್ಲಿ ಕೆಸಿಆರ್ ಹೋರಾಟ ಮತ್ತು ಸಾಧನೆಗಳನ್ನು ತೆರೆ ಮೇಲೆ ತರಲು ಆರ್ಜಿವಿ ಕೈಹಾಕಿದ್ದಾರೆ.