ಚೊಚ್ಚಲ ಸಿನಿಮಾದಲ್ಲೇ ಸಕ್ಸಸ್ ಕಂಡಿರುವ ನಟರುಗಳು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಇದ್ದಾರೆ. ಈ ಸಾಲಿಗೆ ರಕ್ಷಿತಾ ಪ್ರೇಮ್ ಸಹೋದರ ರಾಣಾ ಕೂಡ ಸೇರ್ಪಡೆ ಆಗುತ್ತಿದ್ದಾರೆ.
ಏಕ್ ಲವ್ ಯಾ ಚಿತ್ರದಲ್ಲಿ ಲವರ್ ಬಾಯ್ ಆಗಿ ಬೆಳ್ಳಿತೆರೆ ಮೇಲೆ ಮಿಂಚಿರುವ ರಾಣಾ, ಮೊದಲ ಚಿತ್ರದಲ್ಲೇ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಸದ್ಯ ನಟ ರಾಣಾ ಮೊದಲ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಇದೇ ವೇಳೆ ನಿರ್ಮಾಪಕಿ ರಕ್ಷಿತಾ ಪ್ರೇಮ್, ತಮ್ಮ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ಸಹೋದರ ರಾಣಾನಿಗೆ ಎರಡನೇ ಸಿನಿಮಾ ಮಾಡೋದಕ್ಕೆ ಸಜ್ಜಾಗಿದ್ದಾರೆ.
ರಾಣಾನಿಗಾಗಿ ಎರಡನೇ ಸಿನಿಮಾ ಮಾಡಲು ಯೋಚಿಸುತ್ತಿದ್ದೇವೆ. ಸೂಕ್ತವಾದ ಕಥೆ ಮಾಡಿ ನಿರ್ದೇಶನ ಮಾಡಿದರೆ ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ರಕ್ಷಿತಾ ನಿರ್ದೇಶಕರಿಗೆ ಆಫರ್ ಕೊಟ್ಟಿದ್ದಾರೆ.
ಏಲ್ ಲವ್ ಯಾ ಸಿನಿಮಾದಲ್ಲಿ ರಾಣಾ ಲವರ್ ಬಾಯ್ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಮಾಸ್ ಹೀರೋ ಆಗಿ ಮಾಡಲು ರಕ್ಷಿತಾ ಪ್ರೇಮ್ ನಿರ್ಧರಿಸಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕೆಲ ನಿರ್ದೇಶಕರ ಜೊತೆ ಮಾತನಾಡಿದ್ದಾರೆ. ಆದರೆ ಯಾವುದೇ ಕಥೆ ಫೈನಲ್ ಆಗಿಲ್ಲ. ಸಿನಿಮಾ ಪ್ರೇಕ್ಷಕರಿಗೆ ಅಲ್ಲದೆ ಎಲ್ಲಾ ವರ್ಗದವರಿಗೂ ಕನೆಕ್ಟ್ ಆಗುವ ಕಥೆಯ ಹುಡುಕಾಟದಲ್ಲಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ: ನಿರ್ದೇಶಕ ಪ್ರೇಮ್ ಅಸಮಾಧಾನ