ಕಾವೇರಿ ನದಿಯ ಪುನಶ್ಚೇತನದ ಸಲುವಾಗಿ ನಡೆಯುತ್ತಿರುವ 'ಕಾವೇರಿ ಕೂಗು' ಅಭಿಯಾನಕ್ಕೆ ಕನ್ನಡದ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಕೈ ಜೋಡಿಸಿದ್ದಾರೆ.
ಭಾರತೀಯರನ್ನು ಶತಮಾನದಿಂದ ಸಾಕಿ-ಸಲುಹುತ್ತಿರುವ ಕಾವೇರಿ ನದಿ ಇಂದು ಬತ್ತಿ ಹೋಗುತ್ತಿದೆ. ಇದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಈಶ ಫೌಂಡೇಷನ್ ಕಾವೇರಿ ಕೂಗು ಅಭಿಯಾನ ಶುರುಮಾಡಿದೆ.
ಈ ಅಭಿಯಾನದ ಮೂಲಕ ನದಿಯ ಅಚ್ಚುಕಟ್ಟು ಪಾತ್ರದಲ್ಲಿ ಒಟ್ಟು 242 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ನದಿ ಪಾತ್ರದಲ್ಲಿ ಬರುವ ರೈತರ ಜಮೀನು ಮತ್ತು ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳಲ್ಲಿ 25 ಕೋಟಿ ಸಸಿಗಳನ್ನು ನೆಡಲು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಈಶ ಫೌಂಡೇಷನ್ ಒಪ್ಪಂದ ಮಾಡಿಕೊಂಡಿದೆ.
- " class="align-text-top noRightClick twitterSection" data="">
ಕಾವೇರಿ ಕೂಗು ಅಭಿಯಾನ ಸೆ.3ರಿಂದ ಚಾಲನೆ ಪಡೆಯಲಿದೆ. ಇದರ ಜೊತೆಗೆ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಕೂಡ ಈ ಅಭಿಯಾನದಲ್ಲಿ ಕೈಜೋಡಿಸಬಹುದಾಗಿದೆ. ಸಾರ್ವಜನಿಕರು ₹42 ನೀಡಿದರೆ ಅವರ ಹೆಸರಲ್ಲಿ ಒಂದು ಸಸಿ ನೆಡಲಾಗುತ್ತದೆ. ಒಬ್ಬರು ಎಷ್ಟು ಸಸಿಗಳನ್ನು ಬೇಕಾದರೂ ನೆಡಲು ನೆರವಾಗಬಹುದು.
ಅಭಿಯಾನಕ್ಕೆ ಕೈಜೋಡಿಸೋದು ಹೇಗೆ?
kannada.cauverycalling.org ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಮೊಬೈಲ್ ಸಂಖ್ಯೆ 80009 80009ಕ್ಕೆ ಕರೆ ಮಾಡಿ ಪ್ರತಿ ಗಿಡಕ್ಕೆ 42 ರೂ.ನಂತೆ ಪಾವತಿಸಿ 'ಕಾವೇರಿ ಕೂಗು' ಅಭಿಯಾನ ಬೆಂಬಲಿಸಬಹುದು. ನಾನೂ ಈ ಅಭಿಯಾನದಲ್ಲಿ ಜತೆಯಾಗಿದ್ದೇನೆ, ನೀವು ಕೂಡ ಆಗಿ ಎಂದು ರಕ್ಷಿತ್ ಶೆಟ್ಟಿ ನಾಡಿನ ಜನತೆಗೆ ಕರೆ ನೀಡಿದ್ದಾರೆ.