ಕರ್ನಾಟಕದ ಕ್ರಶ್ ಆಗಿರುವ ರಶ್ಮಿಕಾ ಮದಣ್ಣ 'ಪೊಗರು' ಸಿನಿಮಾ ಪ್ರಮೋಷನ್ಲಿ ಬ್ಯುಸಿಯಾಗಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರ ಇವರ ಸಿನಿ ಜರ್ನಿಯನ್ನೇ ಬದಲಾಯಿಸಿತು. ಈ ಚಿತ್ರ ಯಶಸ್ಸು ಕಂಡ ಮೇಲೆ ತೆಲುಗು, ತಮಿಳಿನಲ್ಲಿ ರಶ್ಮಿಕಾಗೆ ಅವಕಾಶಗಳು ಸಿಗುತ್ತಲೆ ಹೋದವು.
ಈ ಹಿಂದೆ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಡುವೆ ನಿಶ್ಚಿತಾರ್ಥವಾಗಿ ಮದುವೆ ಹಂತದವರೆಗೆ ಮಾತುಕತೆಯಾಗಿ ಮುರಿದು ಬಿದ್ದಿರುವುದು ತುಂಬಾ ಹಳೆ ವಿಷಯ. ಮದುವೆ ಮುರಿದು ಬಿದ್ದ ಮೇಲೆ ರಕ್ಷಿತ್ ಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಆದ್ರೆ ರಶ್ಮಿಕಾ ಮಾತ್ರ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿ ಸೈ ಅನಿಸಿಕೊಳ್ಳುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ತೆಲುಗಿನ ಸ್ಟಾರ್ ವಿಜಯ್ ದೇವರಕೊಂಡ ಜೊತೆ 'ಗೀತ ಗೋವಿಂದಂ' ಸಿನಿಮಾದಲ್ಲಿ ನಟಿಸಿದ್ದು, ಸೂಪರ್ ಹಿಟ್ ಆಗಿತ್ತು. ಇದ್ರ ಜೊತೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೊತೆ ಸಂಬಂಧ ಇದೆ ಎಂಬ ಗಾಳಿ ಸುದ್ದಿಯೂ ಹರಿದಾಡಿತ್ತು.
ಇದೀಗ ಸುದ್ದಿಯೊಂದು ಹರಿದಾಡುತ್ತಿದ್ದು, ಡಿಸೆಂಬರ್ 27ಕ್ಕೆ ರಶ್ಮಿಕಾ ಮತ್ತು ಕಿರಿಕ್ ಹುಡ್ಗ ರಕ್ಷಿತ್ ಶೆಟ್ಟಿ ಮುಖಾಮುಖಿಯಾಗುತ್ತಿದ್ದಾರೆ ಎಂಬ ಗಾಸಿಪ್ ಜೋರಾಗಿದೆ. ಏನಿದು ಇದ್ದಕ್ಕಿದ್ದಂತೆ ಭೇಟಿಯಾಗ್ತಿದ್ದಾರೆ. ಯಾವ ವಿಚಾರಕ್ಕೆ ಮೀಟ್ ಮಾಡ್ತಿದ್ದಾರೆ ಅಂತೀರ. ನಿಜವಾಗಿಯೂ ಇವರು ನೇರಾ ನೇರಾ ಭೇಟಿಯಾಗುತ್ತಿಲ್ಲ.
ಈ ಡಿಸೆಂಬರ್ 27ಕ್ಕೆ ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ತೆರೆಗೆ ಬರಲಿದೆ. ಈ ವಿಷಯವನ್ನು ಸ್ವತಃ ರಕ್ಷಿತ್ ಶೆಟ್ಟಿ ಪ್ರಕಟ ಮಾಡಿದ್ರು. ಹಾಗೂ ರಶ್ಮಿಕಾ ಮತ್ತು ಧ್ರುವ ನಟನೆಯ ಪೊಗರು ಸಿನಿಮಾ ಕೂಡ ಇದೇ ಡಿಸೆಂಬರ್ 27ಕ್ಕೆ ತೆರೆಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಹೀಗಂತ ಕಾರ್ಯಕ್ರವೊಂದರಲ್ಲಿ ಪೊಗರು ನಿರ್ದೇಶಕ ನಂದ ಕಿಶೋರ್ ತಿಳಿಸಿದ್ರು.
ಸದ್ಯ ಕಿರಿಕ್ ಹುಡ್ಗ-ಹುಡ್ಗಿ ನಟಿಸಿರುವ ಈ ಎರಡೂ ಸಿನಿಮಾಗಳು ಒಂದೇ ದಿನ ತೆರೆ ಕಂಡರೆ ಪ್ರೇಕ್ಷಕ ಮಹಾಶಯ ಯಾರ ಕಡೆ ಒಲವು ತೋರುತ್ತಾನೆ ಅನ್ನೋದೆ ಈಗಿರುವ ಕುತೂಹಲ.