ETV Bharat / sitara

ದೊಡ್ಡ ಪರದೆ ಮೇಲೆ ಹೀರೋ ಆದ ರಾಕೇಶ್ ಮಯ್ಯ

author img

By

Published : Feb 16, 2021, 2:50 PM IST

ಮಗಳು ಜಾನಕಿ ಧಾರಾವಾಹಿಯಲ್ಲಿ ನಾಯಕ ನಿರಂಜನ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ರಾಕೇಶ್ ಮಯ್ಯ ಇದೀಗ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.

ರಾಕೇಶ್ ಮಯ್ಯ
ರಾಕೇಶ್ ಮಯ್ಯ

ಮಗಳು ಜಾನಕಿ ಧಾರಾವಾಹಿಯಲ್ಲಿ ನಾಯಕ ನಿರಂಜನ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ರಾಕೇಶ್ ಮಯ್ಯ ಇದೀಗ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಭಾಸ್ಕರ್ ನೀನಾಸಂ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡಿರುವ "ಸದ್ದು ವಿಚಾರಣೆ ನಡೆಯುತ್ತಿದೆ" ಸಿನಿಮಾದಲ್ಲಿ ನಾಯಕರಾಗಿ ನಟಿಸಲಿದ್ದಾರೆ ರಾಕೇಶ್ ಮಯ್ಯ. ಈಗಾಗಲೇ 96, ಶುಭಮಂಗಳ ಸಿನಿಮಾದಲ್ಲಿ ನಟಿಸಿರುವ ರಾಕೇಶ್ ಮಯ್ಯ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ನಾಯಕರಾಗಿ ಮೋಡಿ ಮಾಡಲಿದ್ದಾರೆ.

rakesh mayya  playing in big screen
ರಾಕೇಶ್ ಮಯ್ಯ

ಭಾಸ್ಕರ್‌ ನೀನಾಸಂ ಅವರ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ. ಹಿರಿಯ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಹೇಳುವ ರಾಕೇಶ್ ಮಯ್ಯ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದರು.

rakesh mayya  playing in big screen
ರಾಕೇಶ್ ಮಯ್ಯ

ಬಿ. ಸುರೇಶ್ ನಿರ್ದೇಶನದ ಪ್ರೀತಿ ಪ್ರೇಮ ದಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ರಾಕೇಶ್ ಮಯ್ಯ ಮುಂದೆ ಲವ್ ಲವಿಕೆ, ನಿಹಾರಿಕಾ, ಅವಳು ಕಥೆಯಾದವಳು ಧಾರಾವಾಹಿಯಲ್ಲಿ ಅಭಿನಯಿಸಿರುವ ರಾಕೇಶ್ ಮಯ್ಯಗೆ ಹೆಸರು ತಂದುಕೊಟ್ಟಿದ್ದು, ಮಗಳು ಜಾನಕಿಯ ನಿರಂಜನ್ ಪಾತ್ರ.

rakesh mayya  playing in big screen
ರಾಕೇಶ್ ಮಯ್ಯ

ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಘರ್ಷ ಧಾರಾವಾಹಿಯಲ್ಲಿ ಐಎಎಸ್ ಆಫೀಸರ್ ರಾಕೇಶ್ ಆಗಿ ಇವರು ನಟಿಸುತ್ತಿದ್ದಾರೆ. ಸದ್ಯ ಬೆಳ್ಳಿತೆರೆಗೆ ನಾಯಕರಾಗಿ ಕಾಲಿಡುತ್ತಿರುವ ರಾಕೇಶ್ ಈಗಾಗಲೇ ಕಿರುಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.