ಕನ್ನಡ ಚಿತ್ರರಂಗದಲ್ಲಿ ರ‍್ಯಾಪರ್ ಹಾಡುಗಳಿಂದ ಹೀರೋ ಆದ ನಟ ರಾಕೇಶ್ ಅಡಿಗ, ಇದೀಗ ಡೈರೆಕ್ಷನ್ ಕ್ಯಾಪ್ ತೊಟ್ಟಿರೋದು ಗೊತ್ತೆ ಇದೆ. ರಾಕೇಶ್ ನಿರ್ದೇಶನದ ಚೊಚ್ಚಲ ಚಿತ್ರ 'ನೈಟ್ ಔಟ್' ಸಿನಿಮಾ ಇದೇ 12ರಂದು ಪ್ರೇಕ್ಷಕರ ಮುಂದೆ ಬರಲಿದೆ.
ಬಹುತೇಕ ಹೊಸಬರೇ ಇರುವ 'ನೈಟ್ ಔಟ್' ಸಿನಿಮಾ ಪ್ರಯೋಗಾತ್ಮಕ ಮತ್ತು ಕಮರ್ಷಿಯಲ್ ಅಂಶಗಳಿಂದ ಕೂಡಿದೆ. ಭರತ್, ಅಕ್ಷಯ್ ಹಾಗೂ ಸಂಕಷ್ಟಕರ ಗಣಪತಿ ಚಿತ್ರ ಖ್ಯಾತಿಯ ಶ್ರುತಿ ಗೋರಾಡಿಯಾ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದ 'ಬಿದ್ಲು ಬಿದ್ಲು' ಎಂಬ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದು, ಸಮೀರ್ ಕುಲಕರ್ಣಿ ಸಂಗೀತ ನೀಡಿದ್ದಾರೆ.. ಅಮೆರಿಕಾದಲ್ಲಿರುವ ಡಾಕ್ಟರ್ ನವೀನ್ ಕೃಷ್ಣ ಎಂಬವರು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.