ಬಿಗ್ ಬಾಸ್ ಮನೆಯಿಂದ ರಾಜು ತಾಳಿಕೋಟೆ ಹೊರ ನಡೆದಿದ್ದಾರೆ.ಒಂಭತ್ತು ವಾರಗಳಿಂದ ಇತರ ಸ್ಪರ್ಧಿಗಳ ಜೊತೆ ಕಷ್ಟಪಟ್ಟು ಆಡಿದ ಆಟ ನಿನ್ನೆಗೆ ಅಂತ್ಯವಾಗಿದೆ.

ಇವರ ಬೀಳ್ಕೊಡುಗೆ ದೊಡ್ಡಮನೆಯಲ್ಲಿ ದುಃಖದ ವಾತಾವರಣವನ್ನೇ ನಿರ್ಮಾಣ ಮಾಡಿತ್ತು. ಮನೆ ಮಂದಿಯೆಲ್ಲ ಕಣ್ಣೀರು ಹಾಕುತ್ತ ಹಿರಿಯರಾದ ರಾಜು ತಾಳಿಕೋಟೆಯನ್ನು ಬೀಳ್ಕೊಟ್ಟರು. ಮನೆಯಿಂದ ಹೊರ ನಡೆಯುವ ಮುನ್ನ ಕುರಿ ಪ್ರತಾಪ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ರು. ಈ ವೇಳೆ ಕುರಿ ಪ್ರತಾಪ್ ಅತ್ತದ್ದೂ ಉಂಟು. ಇದಕ್ಕೆ ಕಾರಣ ಬಿಗ್ ಬಾಸ್ ಮನೆಯಲ್ಲಿ ರಾಜು ತಾಳಿ ಕೋಟೆಗೆ ತುಂಬಾ ಹತ್ತಿರವಾಗಿದ್ದವರಲ್ಲಿ ಕುರಿ ಪ್ರತಾಪ್ ಕೂಡ ಒಬ್ರು.

ಇನ್ನು ದೊಡ್ಮನೆಯಲ್ಲಿ ತಾಳಿಕೋಟೆಗೆ ಇಬ್ಬರು ಹೆಣ್ಣುಮಕ್ಕಳು ಇದ್ದು, ಪ್ರಿಯಾಂಕರನ್ನು ದೊಡ್ಡ ಮಗಳೆಂದು ಕರೆದು, ಭೂಮಿ ಶೆಟ್ಟಿಯನ್ನು ಕಿರಿ ಮಗಳೆನ್ನುತ್ತಿದ್ದರು. ಅಲ್ಲದೆ ಟಾಸ್ಕ್ ವೇಳೆ ಆಗಾಗ ಚಂದನ್ ಆಚಾರ್ ಮತ್ತು ತಾಳಿಕೋಟೆ ನಡುವೆ ಸಣ್ಣಮಟ್ಟದ ಜಗಳಗಳು ನಡೆಯುತ್ತಿದ್ದವು.
ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಹಿರಿಯರಂತಿದ್ದ ರಾಜು ತಾಳಿಕೋಟೆ ಹೊರ ನಡೆದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪರ್ಧಿಗಳು ಯಾವ ರೀತಿ ಆಟವಾಡುತ್ತಾರೆ, ಮುಂದಿನ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ನಡೆಯುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
-
ಮನೆಯ ಸೀನಿಯರ್ ಸದಸ್ಯ ರಾಜು ತಾಳಿಕೋಟೆ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ
— Colors Kannada (@ColorsKannada) December 15, 2019 " class="align-text-top noRightClick twitterSection" data="
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/pNfmjcDbmv
">ಮನೆಯ ಸೀನಿಯರ್ ಸದಸ್ಯ ರಾಜು ತಾಳಿಕೋಟೆ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ
— Colors Kannada (@ColorsKannada) December 15, 2019
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/pNfmjcDbmvಮನೆಯ ಸೀನಿಯರ್ ಸದಸ್ಯ ರಾಜು ತಾಳಿಕೋಟೆ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ
— Colors Kannada (@ColorsKannada) December 15, 2019
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/pNfmjcDbmv