ಕೆಲವು ವರ್ಷಗಳ ಹಿಂದೆ ಆರಂಭವಾದ ಡಾ.ರಾಜಕುಮಾರ್ ಐಎಎಸ್ ಅಕಾಡೆಮಿ ಈಗ ‘ಟ್ರಸ್ಟ್’ ಆಗಿ ಪರಿವರ್ತನೆ ಆಗಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ.
ಟ್ರಸ್ಟ್ ಆಗಿ ಬದಲಾಗುವುದರಿಂದ ಸೇವೆಯೇ ಮುಖ್ಯ ಉದ್ದೇಶವಾಗುತ್ತದೆ. ಈ ಆಲೋಚನೆಯನ್ನು ತಮ್ಮ ಎರಡನೇ ಮಗ ಗುರು ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ತಿಳಿಸಿದ್ದಾರೆ ಎಂದು ರಾಘಣ್ಣ ಹೇಳಿದ್ರು.
![rajkumar IAS academy is trust now](https://etvbharatimages.akamaized.net/etvbharat/prod-images/4755602_thumb12.jpg)
ತಮ್ಮ ತಂದೆ ಡಾ. ರಾಜ್ ಕುಮಾರ್ ಜೀವನದ ಬಗ್ಗೆ ಹೇಳುತ್ತಾ ರಾಘಣ್ಣ, ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರಿಗೆ ತಿಳಿಯದೆ ದಾನ ಮಾಡುತ್ತಿದ್ದರಂತೆ. ಅಣ್ಣಾವ್ರ ಈ ಗುಣ ಶಿವರಾಜಕುಮಾರ್ ಅವರಿಗೆ ಬಾಲ್ಯದಲ್ಲಿ ಇದ್ದಿದ್ದು ನಿಜ. ಬಾಲಕನಾಗಿದ್ದಾಗ ಶಿವರಾಜ್ ಕುಮಾರ್ ತಾವು ಹಾಕಿಕೊಂಡಿದ್ದ ಅಂಗಿಯನ್ನೇ ಕೇಳಿದವರಿಗೆ ಕೊಟ್ಟು ಮನೆಗೆ ಬರ್ತಿದ್ರಂತೆ ಎಂದರು.
![rajkumar IAS academy is trust now](https://etvbharatimages.akamaized.net/etvbharat/prod-images/4755602_thumb.jpg)
ಈಗ ಗುರು ರಾಜಕುಮಾರ್ ಐಎಎಸ್ ಅಕಾಡೆಮಿಯಿಂದ ಹಣ ಮಾಡುವ ಪರಿಕಲ್ಪನೆಗೆ ತಿಲಾಂಜಲಿ ಹಾಡಿದ್ದಾರೆ. ಒಬ್ಬ ವ್ಯಕ್ತಿ ಐಎಎಸ್ ಓದುವುದಕ್ಕೆ ಈ ಟ್ರಸ್ಟ್ ಸೇರಿಕೊಂಡರೆ ಆತನ ವಿದ್ಯಾಭ್ಯಾಸ ಮುಗಿಸಿದ ನಂತರ ಆತನಿಂದ ಪಡೆದ ಫೀಜ್ 55000 ರೂಪಾಯಿಯನ್ನು ಹಿಂತಿರುಗಿಸಲಾಗುವುದು ಎಂಬ ಆಲೋಚನೆ ಇದೆ ಎಂದರು.