ETV Bharat / sitara

'ತಲೈವಾ' ಮುಡಿಗೆ ದಾದಾ ಸಾಹೇಬ್ ಫಾಲ್ಕೆ: ರಜಿನಿ ಸಾಧನೆಯ ಹಾದಿ ಬಿಚ್ಚಿಟ್ಟ ಗೆಳೆಯ ರಾಜ್ ಬಹದ್ದೂರ್..! - dadasaheb phalke award 2021

ರಜನಿಕಾಂತ್​ ಅವರು ಸಿನಿಮಾದಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣವೇ ರಾಜ್​ ಬಹದ್ದೂರ್ ನೀಡಿದ್ದ​ ಪ್ರೋತ್ಸಾಹ ಮತ್ತು ಬೆಂಬಲ. ಅದನ್ನು ರಜಿನಿಕಾಂತ್​ ಇಂದಿಗೂ ಮರೆತಿಲ್ಲ. ಬೆಂಗಳೂರಿಗೆ ಬಂದಾಗೆಲ್ಲ ತಮ್ಮ ಸ್ನೇಹಿತನನ್ನ ರಜಿನಿಕಾಂತ್ ಭೇಟಿ ಮಾಡದೇ ಹೋಗಲ್ಲ. ಆ ಮಟ್ಟಿಗೆ ರಜಿನಿಕಾಂತ್ ಮತ್ತು ರಾಜ್ ಬಹದ್ದೂರ್ ನಡುವೆ ಗೆಳೆತನ ಇನ್ನೂ ಹಾಗೆ ಇದೆ.

rajinikanth-dadasaheb-phalke-award-2021
ನಟ ರಜನಿಕಾಂತ್
author img

By

Published : Oct 26, 2021, 3:51 PM IST

ದೇಶದ ಕೋಟ್ಯಂತರ ಅಭಿಮಾನಿಗಳ ತಲೈವಾ ಸೂಪರ್​ ಸ್ಟಾರ್​, ನಟ ರಜಿನಿಕಾಂತ್ ಅವರಿಗೆ ನಿನ್ನೆಯಷ್ಟೇ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ರಜಿನಿ ಅಭಿಮಾನಿ ಬಳಗ ಹಾಗೂ ಸ್ನೇಹಿತರಿಗೆ ಬಹಳ ಸಂತೋಷ ತಂದಿದೆ‌. 'ಶಿವಾಜಿ ರಾವ್ ಗಾಯಕ್‍ವಾಡ್​' ಆಪ್ತ ಸ್ನೇಹಿತ ರಾಜ್​ ಬಹದ್ದೂರ್​ ಅವರು ತಮ್ಮ ಬಹುಕಾಲದ ಗೆಳೆಯನ ಸಾಧನೆಯ ಹಾದಿಯನ್ನು ನೆನಪಿಸಿಕೊಂಡರು‌.

ರಜಿನಿ ಸಾಧನೆ ಹಾದಿ ಬಿಚ್ಚಿಟ್ಟ ಗೆಳೆಯ ರಾಜ್ ಬಹದ್ದೂರ್

ರಜಿನಿಕಾಂತ್​ ಜೊತೆಗಿನ ತಮ್ಮ 50 ವರ್ಷಗಳ ಹಳೇ ಸ್ನೇಹವನ್ನು ರಾಜ್​ ಬಹದ್ದೂರ್ ಮೆಲುಕು ಹಾಕಿದರು. ಸಿನಿಮಾ ನಟ ಆಗುವುದಕ್ಕೂ ಮುನ್ನ ರಜಿನಿಕಾಂತ್​ ಬಸ್​ ಕಂಡಕ್ಟರ್​ ಆಗಿದ್ದರು. ಅದೇ ಬಸ್​ನಲ್ಲಿ ಚಾಲಕನಾಗಿದ್ದ ರಾಜ್​ ಬಹುದ್ದೂರ್​ ಅವರು ರಜಿನಿಗೆ ಆಪ್ತ ಸ್ನೇಹಿತನಾಗಿದ್ದರು. ಇಂದಿಗೂ ಅವರ ಸ್ನೇಹ ಹಾಗೆ ಮುಂದುವರಿದಿದೆ.

ರಜಿನಿಕಾಂತ್​ ಅವರು ಸಿನಿಮಾದಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣವೇ ರಾಜ್​ ಬಹದ್ದೂರ್ ನೀಡಿದ್ದ​ ಪ್ರೋತ್ಸಾಹ ಮತ್ತು ಬೆಂಬಲ. ಅದನ್ನು ರಜಿನಿಕಾಂತ್​ ಇಂದಿಗೂ ಮರೆತಿಲ್ಲ. ಬೆಂಗಳೂರಿಗೆ ಬಂದಾಗೆಲ್ಲ ತಮ್ಮ ಸ್ನೇಹಿತನನ್ನ ರಜಿನಿಕಾಂತ್ ಭೇಟಿ ಮಾಡದೇ ಹೋಗಲ್ಲ. ಆ ಮಟ್ಟಿಗೆ ರಜಿನಿಕಾಂತ್ ಮತ್ತು ರಾಜ್ ಬಹದ್ದೂರ್ ನಡುವೆ ಗೆಳೆತನ ಇನ್ನೂ ಹಾಗೆ ಇದೆ.

ಇನ್ನು ರಜಿನಿ ಹೇಗೆ ತಮಿಳು ಸಿನಿಮಾದಲ್ಲಿ ನಟಿಸೋಕ್ಕೆ ಕಾರಣ ಆಗಿದ್ದು ಹೇಗೆ? ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರು ರಜಿನಿಕಾಂತ್​​ ಅವರಿಗೆ ಅವಕಾಶ ಕೊಟ್ಟ ಇಂಟ್ರಸ್ಟಿಂಗ್ ವಿಚಾರವನ್ನ ರಾಜ್ ಬಹದ್ದೂರ್ ಹಂಚಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.