ETV Bharat / sitara

ಇದು ಸಲ್ಮಾನ್​ ಕುದುರೆ ಎಂದು ನಂಬಿಸಿ 12 ಲಕ್ಷಕ್ಕೆ ನಾಮ..! - Salman Khan news

ಸಂತೋಷ ಭಾಟಿ ಎಂಬುವವರಿಗೆ ಮೂರ ಜನ ಆರೋಪಿಗಳು ನಮ್ಮ ಬಳಿ ಸಲ್ಮಾನ್​​ ಖಾನ್​ ಕುದುರೆ ಇದೆ. ಅದನ್ನು ಮಾರಾಟ ಮಾಡಲು ಹೊರಟಿದ್ದೇವೆ. ನೀವು ಅದನ್ನು ಕೊಂಡರೆ ಒಳ್ಳೆಯ ಲಾಭ ಮಾಡಬಹುದು ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ್ದಾರೆ.

ಇದು ಸಲ್ಮಾನ್​ ಕುದುರೆ ಎಂದು ನಂಬಿಸಿ 12 ಲಕ್ಷಕ್ಕೆ ನಾಮ..!

author img

By

Published : Feb 13, 2021, 3:21 PM IST

ಸಲ್ಮಾನ್​ ಖಾನ್​ ಹೆಸರು ಬಳಸಿಕೊಂಡು ಬರೋಬ್ಬರಿ 12 ಲಕ್ಷ ಹಣ ವಂಚಿಸಿರುವ ಘಟನೆ ರಾಜಸ್ಥಾನದ ಜೋಧ್​​ ಪುರದಲ್ಲಿ ನಡೆದಿದೆ.

ಇಲ್ಲಿನ ಸಂತೋಷ ಭಾಟಿ ಎಂಬುವವರಿಗೆ ಮೂರ ಜನ ಆರೋಪಿಗಳು ನಮ್ಮ ಬಳಿ ಸಲ್ಮಾನ್​​ ಖಾನ್​ ಕುದುರೆ ಇದೆ. ಅದನ್ನು ಮಾರಾಟ ಮಾಡಲು ಹೊರಟಿದ್ದೇವೆ. ನೀವು ಅದನ್ನು ಕೊಂಡರೆ ಒಳ್ಳೆಯ ಲಾಭ ಮಾಡಬಹುದು ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ್ದಾರೆ.

ಈ ಬಗ್ಗೆ ಸಂತೋಷ ಭಾಟಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆದ್ರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್​​ಗೆ ಮಹಿಳೆ ಮೊರೆ ಹೋಗಿದ್ದಾರೆ. ಈ ಸಂಬಧ ನಿನ್ನೆ ವಿಚಾರಣೆ ನಡೆದಿದೆ.

ಏನಿದು ಪ್ರಕರಣ?

ಕುದುರೆ ಜೊತೆ ಸಲ್ಮಾನ್​ ಖಾನ್​ ಇರುವ ಫೋಟೋವನ್ನು ಮಹಿಳೆಗೆ ತೋರಿಸಿದ ಆರೋಪಿಗಳಾದ ನಿರ್ಭಯ್ ಸಿಂಗ್​, ರಾಜ್​ ಪ್ರೀತ್​ ಮತ್ತು ಮತ್ತೊಬ್ಬ ನಾವುಗಳು ನಟ ಸಲ್ಮಾನ್​​ಗೆ ತುಂಬಾ ಆಪ್ತರು. ಈ ಹಿಂದೆ ಕೂಡ ಸಲ್ಮಾನ್​ ಖಾನ್​ ಕುದುರೆಗಳನ್ನು ಮಾರಾಟ ಮಾಡಿದ್ದೇವೆ ಎಂದು ನಂಬಿಸಿ ಮಹಿಳೆಗೆ ನಾಮ ಹಾಕಿದ್ದಾರೆ.

ಇವರ ಮಾತುಗಳನ್ನು ನಂಬಿದ ಮಹಿಳೆ 11 ಲಕ್ಷ ನಗದು ಮತ್ತು ಒಂದು ಲಕ್ಷ ಚೆಕ್​ ನೀಡಿದ್ದಾರೆ. ಆದ್ರೆ ಕುದುರೆ ಕೊಡಿಸುವುದಾಗಿ ಹೇಳಿದ್ದ ಆರೋಪಿಗಳು ತಿಂಗಳಾದರೂ ಕುದುರೆಯನ್ನು ಕೊಡದಿದ್ದಾಗ ಸಂತೋಷ ಭಾಟಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.