'ಲಂಡನ್ನಲ್ಲಿ ಲಂಬೋದರ' ಎಂಬ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ನಿರ್ದೇಶಿಸಿದ್ದ ನವ ನಿರ್ದೇಶಕ ರಾಜ್ ಸೂರ್ಯ ಈಗ ಸದ್ದಿಲ್ಲದೆ ಎರಡನೇ ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿನ ಪಾತ್ರಗಳಿಗಾಗಿ ಎರಡು ದಿನಗಳ ಆಡಿಷನ್ ನಡೆಸಿ ಪಾತ್ರಗಳ ಆಯ್ಕೆ ಮಾಡಿದ್ದಾರೆ.
ಇನ್ನು ಈ ಆಡಿಷನ್ನಲ್ಲಿ ಸುಮಾರು 500 ಕ್ಕೂ ಹೆಚ್ಚು ಮಂದಿ ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪಾತ್ರಕ್ಕೆ ಹೊಂದುವಂತ ಕಲಾವಿದರನ್ನು ನಿರ್ದೇಶಕ ರಾಜ್ ಸೂರ್ಯ ಆಯ್ಕೆ ಮಾಡಿದ್ದಾರೆ. ಚಿತ್ರಕ್ಕೆ ರಾಜ್ ಸೂರ್ಯ 'ಬೆಂಗ್ಳೂರು ಬಾಯ್ಸ್' ಎಂದು ಟೈಟಲ್ ಇಟ್ಟಿದ್ದಾರೆ. ನಾಯಕನಾಗಿ ಬಿಗ್ಬಾಸ್ ಖ್ಯಾತಿಯ ಚಂದನ್ ಆಚಾರ್ ಅವರನ್ನು ಫೈನಲ್ ಮಾಡಿದ್ದಾರೆ ನಿರ್ದೇಶಕ ರಾಜ್ ಸೂರ್ಯ. ಅಲ್ಲದೆ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ರಾಜ್ ಸೂರ್ಯ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. 'ಬೆಂಗ್ಳೂರು ಬಾಯ್ಸ್' ಪಕ್ಕಾ ಕಮರ್ಷಿಯಲ್ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು ಲವ್ ಫೇಲ್ಯೂರ್ ಆದ ನಾಯಕನಿಗೆ ಜೀವನದಲ್ಲಿ ಆತನ ಸ್ನೇಹಿತರು ಯಾವ ರೀತಿ ಸಾಥ್ ಕೊಡುತ್ತಾರೆ ಎಂಬ ಎಳೆಯನ್ನು ಇಟ್ಟುಕೊಂಡು ಚಿತ್ರ ಮಾಡಲು ರಾಜ್ ಸೂರ್ಯ ಪ್ಲ್ಯಾನ್ ಮಾಡಿದ್ದಾರೆ. ವಿ. ಮೂವಿ ಮೇಕರ್ಸ್ ಬ್ಯಾನರ್ ಅಡಿ ಚಿತ್ರವನ್ನು ವಿಕ್ರಂ ಕೆ. ಎಲ್ಲಯ್ಯ ನಿರ್ಮಾಣ ಮಾಡುತ್ತಿದ್ದಾರೆ.