ETV Bharat / sitara

ನಾನು ಸದಾ ನಿನ್ನ ಜೊತೆಯಲ್ಲಿರುವೆ.. ಅಕ್ಕನಿಗೆ ಬೆಂಬಲವಾಗಿ ನಿಂತ ಶಮಿತಾ ಶೆಟ್ಟಿ - ನಟಿ ಶಿಲ್ಪಾ ಶೆಟ್ಟಿ

14 ವರ್ಷಗಳ ನಂತರ ನೀನು ಅಭಿನಯಿಸಿರುವ ಹಂಗಮಾ-2 ಸಿನಿಮಾ ಬಿಡುಗಡೆಯಾಗಿದೆ. ನಿನಗೆ ಶುಭವಾಗಲಿ. ನಾನು ಸದಾ ನಿನ್ನ ಜೊತೆಯಲ್ಲಿರುವೆ. ಜೀವನದಲ್ಲಿ ನೀವು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೀಯಾ. ಪ್ರತಿಬಾರಿ ಸ್ಟ್ರಾಂಗ್ ಆಗುತ್ತಿದ್ದೀಯಾ. ಈ ಕಷ್ಟ ಕೂಡ ಹಾಗೆಯೇ ಕಳೆಯಲಿದೆ ಎಂದು ನಟಿ ಶಮಿತಾ ಶೆಟ್ಟಿ ಅಕ್ಕನಿಗೆ ಧೈರ್ಯ ತುಂಬಿದ್ದಾರೆ.

Actress Shamita Shetty
ನಟಿ ಶಮಿತಾ ಶೆಟ್ಟಿ
author img

By

Published : Jul 24, 2021, 7:16 PM IST

ಹೈದರಾಬಾದ್​​​: ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣದಲ್ಲಿ ಉದ್ಯಮಿ ರಾಜ್​ ಕುಂದ್ರಾ ಬಂಧನವಾಗಿದೆ. ಈ ಮಧ್ಯೆ ನಟಿ ಶಿಲ್ಪಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಕಾಮಿಡಿ ಸಿನಿಮಾ ಹಂಗಮಾ-2 ರಿಲೀಸ್​ ಆಗಿದ್ದು, 14 ವರ್ಷಗಳ ನಂತರ ಸಿನಿಮಾಗೆ ಮರಳಿರುವ ಅಕ್ಕನಿಗೆ ನಟಿ ಶಮಿತಾ ಶೆಟ್ಟಿ ಬೆಂಬಲವಾಗಿ ನಿಂತಿದ್ದಾರೆ.

ಶಿಲ್ಪಾ ಅಭಿನಯದ ಕಾಮಿಡಿ ಮೂವಿ ಹಂಗಮಾ-2 ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣದ ಹೆಚ್ಚಿನ ಮಾಹಿತಿಗಾಗಿ ರಾಜ್​ ಕುಂದ್ರಾ ಅವರ ಪತ್ನಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರನ್ನು ಜುಹುನಲ್ಲಿರುವ ಅವರ ನಿವಾಸದಲ್ಲಿ ಪೊಲೀಸರು ಇಂದು 6 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದು, ಶಮಿತಾ ಶೆಟ್ಟಿ ಅಕ್ಕನಿಗೆ ಬೆಂಬಲವಾಗಿ ನಿಂತಿದ್ದಾರೆ.

ಈ ಕುರಿತು ಇನ್​​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಅವರು, 14 ವರ್ಷಗಳ ನಂತರ ನೀನು ಅಭಿನಯಿಸಿರುವ ಹಂಗಮಾ-2 ಸಿನಿಮಾ ಬಿಡುಗಡೆಯಾಗಿದೆ. ನಿನಗೆ ಶುಭವಾಗಲಿ. ನೀನು ಹಾಗೂ ಚಿತ್ರತಂಡ ಈ ಸಿನಿಮಾಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೀರಿ. ಲವ್​ ಯೂ. ನಾನು ಸದಾ ನಿನ್ನ ಜೊತೆಯಲ್ಲಿರುವೆ. ಜೀವನದಲ್ಲಿ ನೀವು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೀಯಾ. ಪ್ರತಿಬಾರಿ ಸ್ಟ್ರಾಂಗ್ ಆಗುತ್ತಿದ್ದೀಯಾ. ಈ ಕಷ್ಟ ಕೂಡ ಹಾಗೆಯೇ ಕಳೆಯಲಿದೆ. ಹಂಗಮಾ-2 ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ ಶಮಿತಾ.

ಇನ್ನು, ಹಂಗಮಾ- 2 ಸಿನಿಮಾ ವೀಕ್ಷಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಬಳಿಕ ಶಿಲ್ಪಾ ಶೆಟ್ಟಿ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್​​ಗೆ ಒಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.